

ರಾಮದುರ್ಗ: ನಾಡಿನ ಮಹಾನ್ ನಾಯಕರ ಜಯಂತಿಗಳನ್ನು ಕೇವಲ ಆಯಾ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಗ್ಗೂಡಿ ಆಚರಿಸಬೇಕು. ಜತೆಗೆ ಬದುಕಿನಲ್ಲಿ ಅವರ ತತ್ತ್ವ, ಸಿದ್ಧಾಂತ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಶನಿವಾರ ಹಮ್ಮಿಕೊಂಡಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ಸ್ಥಳಿಯ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ 25 ಲ ರೂ. ಹಾಗೂ ಹಲಗತ್ತಿ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ 10 ಲ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಜಯಂತಿ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ಗೆ ಸೂಚಿಸಿದರು.
ಶಿಕ ಆನಂದ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ರೆಡ್ಡಿ ಸಮುದಾಯದ ಅಧ್ಯ ಜ್ಞಾನೇಶ್ವರ ಮೇಲಪ್ಪಗೊಳ, ಪುರಸಭೆ ಅಧ್ಯೆ ಲ$್ಮ ಕಟಕೋಳ ಮಾತನಾಡಿದರು. ಪುರಸಭೆ ಉಪಾಧ್ಯೆ ಸವಿತಾ ಧೂತ, ರೆಡ್ಡಿ ಸಮುದಾಯದ ಉಪಾಧ್ಯ ಗೋಪಾಲರೆಡ್ಡಿ ಸಂಶಿ ಇತರರು ಇದ್ದರು.