ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲಿ

18Manjari2
Published on

ಮಾಂಜರಿ: ಹಸಿರೆಲೆ, ಸಾವಯವ, ಜೈವಿಕ ಗೊಬ್ಬರ ಬಳಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಬೇಕು ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸಲಹೆ ನೀಡಿದರು.

ಸಮೀಪದ ಅಂಕಲಿ ಗ್ರಾಮದಲ್ಲಿ ಚಿದಾನಂದ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಶಿವಶಕ್ತಿ ಶುಗರ್​ ಕಾರ್ಖಾನೆಯ ಮಾರ್ಗದರ್ಶನದಲ್ಲಿ ನಾಟಿ ಮಾಡಿ ಬೆಳೆದ ಕಬ್ಬು ಬೆಳೆ ಸೋಮವಾರ ವೀಸಿ ಮಾತನಾಡಿ, ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಹನಿ ನೀರಾವರಿ ಪದ್ಧತಿಯಿಂದ ಬೆಳೆಗೆ ಬರುವ ರೋಗಗಳ ಪ್ರಮಾಣ ಕ್ಷೀಣಿಸುತ್ತದೆ ಎಂದು ಹೇಳಿದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಡಾ. ಪ್ರಭಾಕರ ಕೋರೆ ಕೋ ಆಪ್​ ಕ್ರೆಡಿಟ್​ ಸೊಸೈಟಿ ನಿರ್ದೇಶಕ ಅಶೋಕ ಚೌಗುಲಾ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಒಕ್ಕಲುತನ ವಿಭಾಗದ ಅಧಿಕಾರಿಗಳಾದ ರಾಹುಲ ಇಚಲಕರಂಜಿ, ವಸಂತ ಕಿಲಿಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net