ಶರಣರ ತತ್ವಾದರ್ಶ ಅಳವಡಿಸಿಕೊಳ್ಳೋಣ; ವಿಪ ಸದಸ್ಯ ಸುನೀಲಗೌಡ ಪಾಟೀಲ

SUNILGOUDA PATIL WORK BABALESHWAR
ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಕೆಆರ್‌ಐಡಿಎಲ್ ವತಿಯಿಂದ ಕೈಗೊಳ್ಳಲಾಗಿರುವ ರೂ. 25 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಸಂಗಮೇಶ ಬಬಲೇಶ್ವರ, ಈರಗೊಂಡ ಬಿರಾದಾರ, ಮುತ್ತಣ್ಣ ಶಿವಣ್ಣವರ ಮತ್ತಿತರರಿದ್ದಾರೆ.
Published on

ವಿಜಯಪುರ: ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಶುಕ್ರವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಅಕ್ಕಮಹಾದೇವಿ ಗುಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿ ನಮಗೆಲ್ಲರಿಗೂ ತಮ್ಮ ಆಚಾರ, ವಿಚಾರ, ವಚನಗಳ ಮೂಲಕ ಮಾದರಿಯಾಗಿದ್ದಾರೆ. ಶರಣ, ಶರಣೆಯರ ದೇವಸ್ಥಾನ ನಿರ್ಮಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗುತ್ತದೆ. ಶ್ರಾವಣ ಮಾಸ ಪ್ರಾರಂಭವಾದಾಗ ಕೆಲವರು ತಮ್ಮ ಆಚಾರ, ವಿಚಾರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಈ ನಡವಳಿಕೆ ಕೇವಲ ಶ್ರಾವಣ ಮಾಸಕ್ಕೆ ಸೀಮಿತವಾಗದೇ, ಜೀವನದುದ್ದಕ್ಕೂ ಪಾಲಿಸುವ ಮೂಲಕ ಶರಣರ ಆಶಯದಂತೆ ಜೀವನ ಸಾಗಿಸಬೇಕು ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮದಗುಣಕಿ ಗ್ರಾಮದಲ್ಲಿ ಕೆಆರ್‌ಐಡಿಎಲ್ ವತಿಯಿಂದ ಕೈಗೊಳ್ಳಲಾಗಿರುವ ರೂ. 25 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ, ಪಿಆರ್‌ಇಡಿ ವತಿಯಿಂದ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಅಂಗನವಾಡಿ ಸಿಬ್ಬಂದಿ ಮತ್ತು ಅಧಿಕಾರಿಗಳು ಮಕ್ಕಳ ಶಿಕ್ಷಣದ ಜೊತೆಗೆ ಹಿತರಕ್ಷಣೆಗೆ ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ ಪೂರೈಕೆ ಮತ್ತು ಶುಚಿತ್ವದ ಕಡೆಗೆ ಗಮನ ನೀಡಬೇಕು. ಅಲ್ಲದೇ, ಮಕ್ಕಳ ರಕ್ಷಣೆಗೆ ಬೇಕಾಗಿರುವ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಹಿರೇಮಠದ ುಹಾದೇವ ಸ್ವಾಮೀಜಿ, ಮಮದಾಪುರ ವಿರಕ್ತಮಠದ ಅಭಿನವ ಮುರಗೇಂದ್ರ ಸ್ವಾಮೀಜಿ, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ, ಮುಖಂಡರಾದ ಈರಗೊಂಡ ಬಿರಾದಾರ, ಬಸವರಾಜ ದೇಸಾಯಿ, ಮುತ್ತಪ್ಪ ಶಿವಣ್ಣವರ, ಅಪ್ಪುಗೌಡ ಪಾಟೀಲ ಶೇಗುಣಸಿ, ಕಿಟ್ಟು ಕುಲಕರ್ಣಿ, ಕವಿತಾ ಮಲ್ಲಯ್ಯ ಮಠಪತಿ, ಮಲ್ಲಿಕಾರ್ಜುನ ಗಂಗೂರ, ಶಿವನಗೌಡ ಬಿರಾದಾರ, ಬಸಪ್ಪ ಭಾವಿಕಟ್ಟಿ, ಸಂಗಮೇಶ ಬಿರಾದಾರ, ಬಿ.ಬಿ. ಪಾಟೀಲ ಶೆಗುಣಿಸಿ, ಡಾ. ಕೌಸರ್ ಅತ್ತಾರ, ಶಂಕ್ರೆಪ್ಪ ಬಿರಾದಾರ ಹೊಸೂರ, ಎಚ್.ಬಿ. ಹರನಟ್ಟಿ, ಜಿ.ಬಿ. ಹರನಟ್ಟಿ, ಅಧಿಕಾರಿಗಳಾದ ಕೆ.ಕೆ. ಚವಾಣ್, ಅನೀಲ ಹಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net