ಶರಣರ ಚಿಂತನೆ ಅಳವಡಿಸಿಕೊಳ್ಳಲಿ

10Kakamari1
Published on

ಕಕಮರಿ: ದೇಹವೆಂಬ ಬದುಕಿನ ರಥ ಸುರಕ್ಷಿತವಾಗಿ ಎಳೆಯಲು ಧರ್ಮ ಮತ್ತು ಅಧ್ಯಾತ್ಮದ ಅರಿವು ಬೇಕು ಎಂದು ಅತ್ತಿಗೇರಿ ಅದ್ವೈತಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಅಂಬಾಭವಾನಿ ಯೋಗಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡದೇವಿ ನವರಾತ್ರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಂಡುಕೊಳ್ಳಬೇಕು. ಕಾಯಕ ಮತ್ತು ದಾಸೋಹ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ಪರರಿಗೆ ಒಳ್ಳೆಯದು ಮಾಡುವುದರ ಜತೆಗೆ ಸತ್ಯ, ಅಹಿಂಸೆಯಿಂದ ನಡೆದುಕೊಳ್ಳಬೇಕು ಎಂದರು.

ಅಡಹಳಟ್ಟಿ ಪ್ರಭುಲಿಂಗ ಸ್ವಾಮೀಜಿ, ಶ್ರೀ ಅಮ್ಮಾಜೇಶ್ವರಿ ದೇವಸ್ಥಾನ ಅಧ್ಯಕ್ಷ ಅಪ್ಪುಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಲ್ಲವಿ ವಾಲಿ, ಪಿಡಿಒ ಪುಷ್ಪಾ ಜನಗೌಡ, ಬಿಎಸ್‌ಎಫ್ ಯೋಧೆ ಗಂಗೋತ್ರಿ ತಳಕಟ್ಟಿ, ಗ್ರಾಪಂ ಸದಸ್ಯರಾದ ಕಲ್ಲಪ್ಪ ತಂಗಡಿ, ಮಲ್ಲಿಕಾರ್ಜುನ ಶೇಡ್ಯಾಳ, ಹಿರಿಯರಾದ ಭೀಮಪ್ಪ ಸಿಂಧೂರ, ಭುಜಪ್ಪ ಸವದತ್ತಿ, ಅಪ್ಪಾಸಾಹೇಬ ಪೂಜಾರಿ, ಈರಪ್ಪ ತಂಗಡಿ, ಕಲ್ಲಪ್ಪ ನಾಟೀಕಾರ, ಲಕ್ಷ್ಮಣ ನಾಟೀಕಾರ, ಶ್ರೀಶೈಲ ಬಿರಾದಾರ, ಹನುಮಂತ ಸಿಂಧೂರ ಇತರರಿದ್ದರು. ಶ್ರೀಶೈಲ ಜನಗೌಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net