ಇಂದೋರ್ ಮಾದರಿ ಅಳವಡಿಸಿಕೊಳ್ಳೋಣ...

DSC_9472
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಾಲಿಕೆ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಇಂದೋರ್ ಪ್ರವಾಸದ ಮಾಹಿತಿ ನೀಡಿದರು.

ಕಸ ವಿಲೇವಾರಿ, ಪೌರ ಕಾರ್ಮಿಕರ ನಿರ್ವಹಣೆ ಇನ್ನಿತರ ವಿಷಯಗಳ ಮಾಹಿತಿ ಪಡೆಯಲು ಸಮಿತಿಯ ಸದಸ್ಯರು ಇಂದೋರ್‌ಗೆ ಹೋಗಿದ್ದೆವು. ಅಲ್ಲಿನ ಸ್ವಚ್ಛತೆ ನಿರ್ವಹಣೆ ಮತ್ತು ಜನರ ಸಹಕಾರ ಅನುಭವಕ್ಕೆ ಬಂತು. ಅಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ವಿಷಯದಲ್ಲಿ ಜನರ ಸಹಭಾಗಿತ್ವ ಪ್ರಮುಖವಾಗಿದೆ. ಸಂಘ- ಸಂಸ್ಥೆಗಳು ಜನರಿಗೆ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುತ್ತಿವೆ. ಅವಳಿನಗರದಲ್ಲಿ ಕಸ ನಿರ್ವಹಣೆ ಪಾಲಿಕೆಗೆ ಸವಾಲಾಗಿದೆ. ಪ್ರತಿ ಮನೆ, ಅಂಗಡಿ, ಸಮುದಾಯ ಭವನಗಳಿಂದ ಕಸ ಎತ್ತುವ ಕೆಲಸ ಆಗಬೇಕು. ಅದಕ್ಕೆ ಕನಿಷ್ಠ ಸೇವಾ ವಂತಿಗೆ ಪಡೆಯಬೇಕು. ಪೌರ ಕಾರ್ಮಿಕರ ಘನತೆ ಹೆಚ್ಚಿಸುವ ಮತ್ತು ಅವರಿಗೆ ರಕ್ಷಣೆ ಒದಗಿಸುವ ಕೆಲಸವಾಗಬೇಕು. ಪ್ರತಿಯೊಬ್ಬ ಸದಸ್ಯರು ಕಸ ವಿಂಗಡನೆಯ ಕುರಿತು ತಮ್ಮ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಿ ಇಂದೋರ್ ಮಾದರಿ ಅಳವಡಿಸಿಕೊಳ್ಳೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net