ಯುವಜನಾಂಗ ದೇಶಪ್ರೇಮ ಬೆಳೆಸಿಕೊಳ್ಳಲಿ

5
Published on

ರಾಯಬಾಗ: ಸ್ವಾತಂತ್ರಕ್ಕಾಗಿ ಹೋರಾಟ ಮಾಡಿರುವ ಮಹನೀಯರನ್ನು ನಿತ್ಯ ಸ್ಮರಣೆ ಮಾಡಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿ ತಾಲೂಕಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರೊೃೀತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ದೇಶ ಪ್ರೇಮ ಬೆಳೆಸಿಕೊಂಡು, ನಮ್ಮ ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು.

ಬಿಇಒ ಬಸವರಾಜಪ್ಪ ಆರ್., ತಾಲೂಕು ದೈಹಿಕ ಪರಿವೀಕ್ಷಕ ಎಂ.ಪಿ.ಜಿರಗ್ಯಾಳ, ತಾಪಂ ಇಒ ಅರುಣ ಮಾಚಕನೂರ, ಸಿಪಿಐ ಎಚ್.ಡಿ.ಮುಲ್ಲಾ, ಸಮಾಜಕಲ್ಯಾಣಾಧಿಕಾರಿ ವಿ.ಎಸ್.ಚಂದರಗಿ, ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ, ಟಿಎಚ್‌ಒ ಡಾ.ಎಸ್.ಎಂ.ಪಾಟೀಲ, ಸಾಮಾಜಿಕ ಅರಣ್ಯಾಧಿಕಾರಿ ಶಿವಕುಮಾರ ಡಿ., ಕೃಷಿ ಅಧಿಕಾರಿ ವಿನೋದ ಮಾವರಕರ, ಪಿಡಬ್ಲ್ಯುಡಿ ಎಇಇ ಆರ್.ಬಿ.ಮನವಡ್ಡರ, ಜಿಪಂ ಎಇಇ ರಾಜೇಶ ಡಂಗ, ಡಾ.ಎಂ.ಬಿ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net