

ಉಪ್ಪಿನಬೆಟಗೇರಿ: ಕಾರ್ವಿುಕರು ಕೆಲಸದ ಜತೆಗೆ ಆರೋಗ್ಯದತ್ತ ಗಮನ ಕೊಟ್ಟರೆ, ಕುಟುಂಬ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಿಯಾಂಕಾ ಚವ್ಹಾಣ ಹೇಳಿದರು.
ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗ್ರಾಪಂ ವತಿಯಿಂದ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿ ಇತ್ತೀಚೆಗೆ ಏರ್ಪಡಿಸಿದ್ದ ನರೇಗಾ ಕೂಲಿ ಕಾರ್ವಿುಕರು ಮತ್ತು ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಮಾತನಾಡಿ, ಶರೀರದ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆಯೊಂದಿಗೆ ದಿನನಿತ್ಯ ವ್ಯಾಯಾಮ ಮಾಡಬೇಕು. ತಂಬಾಕು ಸೇರಿದಂತೆ ಆರೋಗ್ಯದ ಮೇಲೆ ಹಾನಿ ಮಾಡುವ ವಸ್ತುಗಳನ್ನು ಸೇವಿಸಬಾರದು ಎಂದರು.
ಡಾ.ಪ್ರಿಯಾಂಕಾ ಚವ್ಹಾಣ, ಆರೋಗ್ಯ ಸಹಾಯಕಿಯರಾದ ಟಿ.ಎಂ. ಸಿರಗಾಪೂರ ಮತ್ತು ಶ್ವೇತಾ ದೇವಾಂಗಮಠ ಅವರು 200ಕ್ಕೂ ಅಧಿಕ ನರೇಗಾ ಕೂಲಿಕಾರರು ಹಾಗೂ ಹಿರಿಯ ನಾಗರಿಕರ ಆರೋಗ್ಯ ತಪಾಸಿಸಿದರು. ಗ್ರಾಪಂ ಅಧ್ಯಕ್ಷೆ ಸಾಹೀರಾಬಾನು ಲಾಲ್ಮಿಯಾ ಉದ್ಘಾಟಿಸಿದರು. ಕೆಎಚ್ಪಿಟಿ ತಾಲೂಕು ಸಂಯೋಜಕಿ ಗಿರಿಜಾ ಹೊಸವಾಳ, ಪಿಡಿಒ ಬಿ.ಎ. ಬಾವಾಖಾನವರ, ಗ್ರಾಪಂ ಸದಸ್ಯ ಮುಸ್ತಾಕ್ ನದಾಫ, ಕರಬಸಪ್ಪ ಓಂಕಾರಿ, ಮಲ್ಲಪ್ಪ ಮಸೂತಿ, ಮಹಾದೇವಪ್ಪ ಮೊರಬ, ರಾಚಪ್ಪ ತೊಗ್ಗಿ, ವಿರೂಪಾಕ್ಷಪ್ಪ ಬಮ್ಮಶೆಟ್ಟಿ, ಪ್ರಕಾಶ ದೊಡಮನಿ, ಮಹಾಂತೇಶ ಯಲಿಗಾರ, ಫಕೀರಪ್ಪ ಶಿವಳ್ಳಿ, ರಾಜೇಶ್ವರಿ ಹಿತ್ತಲಮನಿ, ಅಬ್ದುಲ್ ಸಲಾಂ ಲಾಲ್ಮಿಯಾ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.