ಮಹಿಳೆಯರು ಕೀಳರಿಮೆ ತೊರೆಯಲಿ

18 Dwd 2
Published on

ಧಾರವಾಡ: ಮಹಿಳೆಯರು ತಮ್ಮ ಶಕ್ತಿ, ಸಾಮರ್ಥ್ಯದ ಬಗ್ಗೆ ಕೀಳರಿಮೆ ಹೊಂದಬಾರದು. ತಮ್ಮಲ್ಲಿರುವ ಪ್ರತಿಭೆಯನ್ನು ಸೂಕ್ತ ವೇದಿಕೆಯಲ್ಲಿ ಬಳಸಿಕೊಂಡು ಸಾಧಕಿಯರಾಗಬೇಕು ಎಂದು ಕರ್ನಾಟಕ ಕಲಾ ಕಾಲೇಜಿನ ಮನೋವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಕೆಂಚಪ್ಪನವರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾರ್ವತೆವ್ವ ಮೆಳವಂಕಿ, ಲೂಸಿ ಸಾಲ್ದಾನಾ, ನಿಂಗಮ್ಮ ಹೂಗಾರ ದತ್ತಿ ಕಾರ್ಯಕ್ರಮದಲ್ಲಿ ಮಹಿಳೆಯರ ಮÁನಸಿಕ ಸಂಘರ್ಷದ ಕುರಿತು ಅವರು ಉಪನ್ಯಾಸ ನೀಡಿದರು.
ಟಗರು ಸಾಕಣೆಯಲ್ಲಿ ವಿಶೇಷ ಸಾಧನೆಗೈದ ಮುಳುಗುಂದದ ಕೃಷಿ ಸಾಧಕಿ ಮಂಗಳಾ ನೀಲಗುಂದ, ಯುನಿವರ್ಸಿಟಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶ್ರಾವಂತಿ ಅವರನ್ನು ಸನ್ಮಾನಿಸಲಾ¬ತು.
ದತ್ತಿ ದಾನಿ ಸರೋಜಾ ಪಂಡಿತ್ ಸಿತಾರ್ ವಾದನದಲ್ಲಿ ವಚನ ನುಡಿಸಿದರು. ಮÁಲತಿ ಪಂಡಿತ್ ಹಾಗೂ ನಮ್ರತಾ ಪಾಟೀಲ, ಪ್ರಜ್ಞಾ ಮತ್ತಿಹಳ್ಳಿ, ಅರುಣಾ ಹಳ್ಳಿಕೇರಿ, ಇತರರಿದ್ದರು. ಕಸ್ತೂರಿ ಬೀರಪ್ಪನವರ ಪ್ರಾರ್ಥಿಸಿದರು. ಸುನಿತಾ ಮೂರಶಿಳ್ಳಿ ನಿರೂಪಿಸಿದರು. ಮೇಘಾ ಹುಕ್ಕೆರಿ ಪರಿಚಯಿಸಿದರು. ಉಷಾ ಗದ್ದಗಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net