ಮಹಿಳೆಯರು ಜೀವನಮಟ್ಟ ಸುಧಾರಿಸಿಕೊಳ್ಳಲಿ

web4
ಕಾಗವಾಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಹುಲ ಕಟಗೇರಿ ಮಾತನಾಡಿದರು. ಡಾ. ಎಸ್.ಎ. ಕರ್ಕಿ, ಡಾ. ಎಸ್.ಪಿ. ತಳವಾರ ಇತರರಿದ್ದರು.
Published on

ಕಾಗವಾಡ: ಸಾಂವಿಧಾನಿಕವಾಗಿ ನೀಡಿರುವ ಹಕ್ಕು ಮತ್ತು ಅವಕಾಶ ಬಳಸಿಕೊಂಡು ಮಹಿಳೆಯರು ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ವಕೀಲ ರಾಹುಲ ಕಟಗೇರಿ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಶಿಕ್ಷಣಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಮಹಿಳಾ ಸಂಘಗಳ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಸಾಂವಿಧಾನಿಕ ಅವಕಾಶಗಳು ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶಿಕ್ಷಣ ಬದಲಾವಣೆಗೆ ದಾರಿದೀಪವಿದ್ದಂತೆ. ಸಮಾಜದ ಏಳಿಗೆಗಾಗಿ ಮಹಿಳೆಯರು ಶಿಕ್ಷಣ ಬಳಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎ. ಕರ್ಕಿ ಮಾತನಾಡಿದರು. ಡಾ. ಎಸ್.ಪಿ. ತಳವಾರ, ಉಪಪ್ರಾಚಾರ್ಯೆ ಡಾ. ಡಿ.ಡಿ. ನಗರಕರ, ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಿ.ಡಿ. ದಾಮಣ್ಣವರ, ಡಾ. ಆರ್.ಎಸ್. ಕಲ್ಲೋಳಿಕರ ಇತರರಿದ್ದರು. ಕಾವ್ಯಾ ಅಸೋದೆ ಸ್ವಾಗತ ಗೀತೆ ಹಾಡಿದರು. ವರ್ಷಾ ಮಾಳಗೆ ಸ್ವಾಗತಿಸಿದರು. ಪ್ರೊ. ಪಿ.ಎಸ್. ಪಟ್ಟಣಶೆಟ್ಟಿ ಪರಿಚಯಿಸಿದರು. ಪ್ರೊ. ವಿ.ಟಿ. ಧಬಾಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net