ುಹಿಳೆಯರು ಆರೋಗ್ಯದತ್ತ ಹೆಚ್ಚಿನ ಗಮನಹರಿಸಲಿ

ಕೊಳ್ಳೇಗಾಲದ ಜೆಸ್‌ಎಸ್ ಮಹಿಳಾ ಕಾಲೇಜಿನ  ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸುಮಪ್ರಭಾ ಉದ್ಘಾಟಿಸಿದರು. ಕೊಂಗಳಪ್ಪ, ಮಹದೇವ ಪ್ರಸಾದ್, ವಿಮಲಾ ಮೂರ್ತಿ, ಪುಷ್ಪಾ ಶಾಂತಮಲ್ಲಪ್ಪ, ಪ್ರಮೀಳಾ ನಂಜಪ್ಪ ಇದ್ದರು.
ಕೊಳ್ಳೇಗಾಲದ ಜೆಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸುಮಪ್ರಭಾ ಉದ್ಘಾಟಿಸಿದರು. ಕೊಂಗಳಪ್ಪ, ಮಹದೇವ ಪ್ರಸಾದ್, ವಿಮಲಾ ಮೂರ್ತಿ, ಪುಷ್ಪಾ ಶಾಂತಮಲ್ಲಪ್ಪ, ಪ್ರಮೀಳಾ ನಂಜಪ್ಪ ಇದ್ದರು.
Published on

ಕೊಳ್ಳೇಗಾಲ: ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಸ್ತ್ರೀರೋಗ ತಜ್ಞೆ ಡಾ.ಸೋಮಪ್ರಭಾ ಸಲಹೆ ನೀಡಿದರು.

ಪಟ್ಟಣದ ಜೆಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಕ್ಕನ ಬಳಗ, ವೀರಶೈವ ಮಹಿಳಾ ವೇದಿಕೆಯ 22ನೇ ವಾರ್ಷಿಕೋತ್ಸವ ಹಾಗೂ ಪದಾಧಿಕಾರಿಗಳ ಸಮಾರಂಭದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ರೋಗ ಬರಲಿದೆ. ಇತ್ತೀಚೆಗೆ ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಾಗಿದ್ದು, ಆರಂಭದಲ್ಲೇ ಇದನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟಬಹುದು ಎಂದು ತಿಳಿಸಿದರು.

ಹದಿಹರೆಯದ ವಯಸ್ಸಿನ ಹೆಣ್ಣು ಮಕ್ಕಳಿಗೆ ಋತುಚಕ್ರ ಸಮಸ್ಯೆಗಳು ಕಾಡಲಾರಂಭಿಸಿದೆ. ದೈಹಿಕ ವ್ಯಾಯಾಮ ಮಾಡದಿರುವುದು, ಜಂಕ್ ಫುಡ್ ಸೇವನೆ, ಸಕ್ಕರೆ ಅಂಶ ಹೆಚ್ಚಿರುವ ತಿನಿಸುಗಳ ಸೇವನೆ, ಮೈದಾ ಹಿಟ್ಟಿನ ಖಾದ್ಯಗಳ ಸೇವನೆಯಿಂದ ಹೆಣ್ಣು ಮಕ್ಕಳು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಪಾಲಕರು ಚಿಕ್ಕವಯಸ್ಸಿನಲ್ಲೇ ಮಕ್ಕಳು ಸೇವನೆ ಮಾಡುವ ಆಹಾರದ ಬಗ್ಗೆ ನಿಗಾವಹಿಸಬೇಕಿದೆ ಎಂದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ಕೊಂಗಳಪ್ಪ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಪಾಲಕರು ಮಕ್ಕಳಿಗೆ ಸಮಯವನ್ನು ಸದ್ಭಳಕ್ಕೆ ಮಾಡಿಕೊಳ್ಳುವುದು ಹಾಗೂ ಶಿಸ್ತನ್ನು ಕಲಿಸಿದರೆ ಮಕ್ಕಳು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ನೂತನ ಪದಾಧಿಕಾರಿಗಳ ಪದಗ್ರಹಣ: ಅಕ್ಕನ ಬಳಗದ ಗೌರವಾಧ್ಯಕ್ಷೆಯಾಗಿ ಪರಿಮಳಾ ನಾಗಪ್ಪ, ಸಂಸ್ಥಾಪಕ ಅಧ್ಯಕ್ಷೆಯಾಗಿ ನಿರ್ಮಲಾ ಮೂರ್ತಿ, ನೂತನ ಅಧ್ಯಕ್ಷೆಯಾಗಿ ಅರುಣಾ ಕಾರ್ತಿಕ್, ನಿಕಟಪೂರ್ವ ಅಧ್ಯಕ್ಷೆಯಾಗಿ ಪುಷ್ಪಾ ಶಾಂತಮಲ್ಲಪ್ಪ, ಉಪಾಧ್ಯಕ್ಷೆಯಾಗಿ ಸವಿತಾ ಲೋಕೇಶ್, ಸಹ ಕಾರ್ಯದರ್ಶಿಯಾಗಿ ಶ್ವೇತಾ ಸ್ವಾಮಿ, ಖಂಜಾಚಿಯಾಗಿ ಅನುಮಪಾ ಗುರಪ್ಪ, ಸಂಚಾಲಕರಾಗಿ ರೂಪಾ ತೋಟೇಶ್, ಲೀಲಾವತಿ ಶಿವಕುಮಾರ್, ನಿರ್ದೇಶಕರಾಗಿ ವಿಜಯಾಗುರುರಾಜ್, ವೀರಭದ್ರಸ್ವಾಮಿ, ಶ್ವೇತಾ ಕೌಶಿಕ್, ಮಮತಾ ರಾಜೇಶ್ ಪದಗ್ರಹಣ ಮಾಡಿದರು.

ಅಕ್ಕನ ಬಳಗ ಗೌರವಾಧ್ಯಕ್ಷೆ ಪರಿಮಳಾ ನಾಗಪ್ಪ ಮಾತನಾಡಿದರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಹದೇವಪ್ರಸಾದ್, ಅಕ್ಕನ ಬಳಗದ ಸಂಸ್ಥಾಪಕ ಅಧ್ಯಕ್ಷೆ ವಿಮಲಾ ಮೂರ್ತಿ, ತಾಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷೆ ಪುಷ್ಪಾ ಶಾಂತಮಲ್ಲಪ್ಪ, ನಿಕಟ ಪೂರ್ವ ಕಾರ್ಯದರ್ಶಿ ಪ್ರಮೀಳಾ ನಂಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net