ಮಹಿಳೆಯರು ಕಾನೂನು ಸದ್ಬಳಕೆ ಮಾಡಿಕೊಳ್ಳಲಿ

16 kmp
ಕಂಪ್ಲಿಯಲ್ಲಿ ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಆಯೋಜಿಸಿದ್ದ ಮಹಿಳಾ ಸಂಗಮ ಸಮಾವೇಶವನ್ನು ಶಾಸಕ ಜೆಎನ್.ಗಣೇಶ್ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ಬಿ.ಗಣೇಶ್, ನಿರ್ಮಲಾ ಕೆ.ವಸಂತಕುಮಾರ, ಎಸ್.ಪಿ.ಶ್ವೇತಾಂಬರಿ, ಮುಕ್ಕುಂದಿ ತಿಪ್ಪೇಸ್ವಾಮಿ ಇತರರಿದ್ದರು.
Published on

ಕಂಪ್ಲಿ: ಮಹಿಳೆಯರು ಸಂಕಷ್ಟಗಳಿಂದ ಪಾರಾಗಲು ಕಾನೂನಿನ ಅರಿವು ಅಗತ್ಯ ಎಂದು ಹೊಸಪೇಟೆಯ ವಕೀಲೆ ಎಸ್.ಪಿ.ಶ್ವೇತಾಂಬರಿ ಹೇಳಿದರು.
ಇಲ್ಲಿನ ವೀರಶೈವ ಭವನದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಮ್ಮಿಕೊಂಡಿದ್ದ ಮಹಿಳಾ ಸಂಗಮ ಸಮಾವೇಶದಲ್ಲಿ ಮಾತನಾಡಿದರು.

ಮಹಿಳೆ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಬಲಳಾಗಿರಬೇಕು. ಕುಟುಂಬದ ಸಾಮರಸ್ಯ ಕಾಪಾಡಿಕೊಳ್ಳುವ ಜಾಗೃತಿಯೊಂದಿಗೆ ಕಾನೂನಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮುಕ್ಕುಂದಿ ಮಮತಾ ತಿಪ್ಪೇಸ್ವಾಮಿ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ಹಿತಾಸಕ್ತಿ ತೋರಬೇಕು. ಸರ್ಕಾರದಿಂದ ದೊರಕುವ ತರಬೇತಿ ಪಡೆದು ಸ್ವಉದ್ಯೋಗಗಳಿಸಿ ಆರ್ಥಿಕ ಸಬಲತೆ ಸಾಧಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಶಾಸಕ ಜೆ.ಎನ್.ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಮಾಜಿ ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತಕುಮಾರ ಅಧ್ಯಕ್ಷತೆವಹಿಸಿದ್ದರು.

ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ್, ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್, ರೈತ ಮಹಿಳೆ ಎ.ವಿ.ಬನಶಂಕರಿ, ಸಪ್ತಗಿರಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ವೆಂಕಟೇಶ್ ಸಿ.ಭರಮಕ್ಕನವರ್, ಪ್ರಮುಖರಾದ ಕನಕಪ್ಪ ಸುಣಗಾರ್, ಹಾಲಪ್ಪ, ರೇಖಾ, ಸಂಜೀವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net