

ಶಿಗ್ಗಾಂವಿ: ಪ್ರತಿಯೊಂದು ರಂಗ ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆ ನಿರ್ವಹಿಸುವ ಪಾತ್ರಗಳು ಪ್ರಮುಖವಾಗಿದ್ದು, ಮಹಿಳೆಯು ತನ್ನ ಹಲವು ಜವಾಬ್ದಾರಿಗಳ ನಡುವೆಯೂ ಮತ್ತೊಬ್ಬರ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾಳೆ ಎಂದು ತಾಲೂಕು ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ. ಲಕ್ಷ್ಮಣ ನಾಯ್ಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸ್ತ್ರೀಯರು ಹೆಚ್ಚೆಚ್ಚು ಶಿಕ್ಷಣ ಕಲಿತು ಮುಖ್ಯವಾಹಿನಿಗೆ ಬರಬೇಕು ಎಂದರು.
ತಜ್ಞ ವೈದ್ಯೆ ಡಾ. ತಬಸುಮ ಮಾತನಾಡಿ, ದೇಶದಲ್ಲಿ ಪುರುಷರಿಗೆ ಸಿಗುವ ಗೌರವ ಸ್ತ್ರೀಯರಿಗಿಲ್ಲ. ಕಾರಣ ಅನಕ್ಷರತೆ ಆದ್ದರಿಂದ ಸ್ತ್ರೀಯರು ಶಿಕ್ಷಣವಂತರಾಗಬೇಕು ಎಂದರು.
ತಜ್ಞ ವೈದ್ಯೆ ಡಾ.ರಾಜೇಶ್ವರಿ ಮಾತನಾಡಿದರು. ಆರೋಗ್ಯ ಇಲಾಖೆಯ ತಜ್ಞ ವೈದ್ಯ ಡಾ.ಗುರುರಾಜ, ಡಾ.ಸುಭಾಸ ಲೋಖ್ರೆ, ಡಾ.ವಿವೇಕ ಜೈನಕೇರಿ, ಡಾ.ಮಹೇಶ ಜಗದವರ, ಡಾ.ಪಾಟೀಲ, ಡಾ.ವಿದ್ಯಾವತಿ ಬ್ಯಾಟಪ್ಪನವರ, ಶುಶ್ರೂಷಾ ಅಧೀಕ್ಷಕಿ ಸುಶೀಲಾ ದೇವಸೂರ ಹಾಗೂ ಆಸ್ಪತ್ರೆ ಸಿಬ್ಬಂದಿ ಇತರರಿದ್ದರು.