

ಗಜೇಂದ್ರಗಡ: ಮಹಿಳೆಯರು ಆತ್ಮವಿಶ್ವಾಸ, ದೃಢ ಸಂಕಲ್ಪ, ವಿಶಾಲ ಮನೋಭಾವದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪುರುಷರಿಗೆ ಸರಿಸಮಾನರಾಗಿ ಬೆಳೆಯಲು ಸಂಘಟನಾತ್ಮಕ ಶಕ್ತಿ ರೂಢಿಸಿಕೊಳ್ಳಬೇಕು ಎಂದು ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಪಟ್ಟಣದ ರೋಣ ರಸ್ತೆಯ ಅಕ್ಕನ ಬಳಗದ ಕಾರ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಹಿಳೆಯರು ಮನೆಯ ಜವಾಬ್ದಾರಿಯಿಂದ ಹಿಡಿದು ಆಡಳಿತ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಪ್ರತಿ ಪುರುಷರ ಬೆಳವಣಿಗೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಾಳೆ ಎಂದರು.
ಲೇಖಕಿ ಕಸ್ತೂರೆಮ್ಮ ಹಿರೇಮಠ, ಡಾ. ರೇಷ್ಮಾ ಕೋಲಕಾರ ಮಾತನಾಡಿದರು. ವಿಜಯಬಾಯಿ ಬಾಗಮಾರ, ಗೀತಾ ಕಂಬಳ್ಯಾಳ, ವನಜಾ ಮಾಳಗಿ, ಅನಸೂಯಾ ವಾಲಿ, ಸುವರ್ಣಾ ನಂದಿಹಾಳ, ಸುಜಾತಾ ಬಡಿಗೇರ, ಅನುಪಮಾ ಪಲ್ಲೇದ, ಸಂಗೀತಾ ಗಾಣಿಗೇರ, ಸುಮಿತ್ರಾ ತೊಂಡಿಹಾಳ, ಲೀಲಾವತಿ ಸವಣೂರ, ವಿಜಯಲಕ್ಷ್ಮೀ ಚಟ್ಟೇರ, ಶ್ವೇತಾ ಕಾರಡಗಿ, ಸುಕನ್ಯಾ ಹೊಗರಿ, ಗೀತಾ ವಾಲಿ, ವಾಣಿ ಲಿಂಗಶೆಟ್ಟರ್, ನೇತ್ರಾ ಹೊಸಂಗಡಿ, ಕಸ್ತೂರೆಮ್ಮ ಹಿರೇಮಠ, ಇತರರಿದ್ದರು.