ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೋೂಳ್ಳಲಿ

Let women build a self-reliant life
ಬನಹಟ್ಟಿಯಲ್ಲಿ ಮಹಿಳೆಯರಿಗೆ ಹಮ್ಮಿಕೋೂಂಡಿದ್ದ ತರಬೇತಿ ಕಾರ್ಯಾಗಾರಕ್ಕೋ ಶರಣಬಸವ ಶಿವಾಚಾರ್ಯರು ಚಾಲನೆ ನೀಡಿದರು. ಮಲ್ಲು ತುಂಗಳ, ಶಾಂತಾ ಸೊರಗಾಂವಿ ಇದ್ದರು.
Published on

ರಬಕವಿ/ಬನಹಟ್ಟಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೋೂಂಡು ಸಮರ್ಥವಾಗಿ ಕುಟುಂಬ ನಿರ್ವಹಣೆ ಮಾಡಬೇಕು ಎಂದು
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು.

ಬನಹಟ್ಟಿ ನಗರದ ವಿಠ್ಠಲ ಮಂದಿರದಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಸೋಮವಾರ ಸಂಜೆ ಹಮ್ಮಿಕೋೂಂಡಿದ್ದ ಹಲವಾರು ತರಬೇತಿ ಕಾರ್ಯಾಗಾರಕ್ಕೋ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಾಂತರ ಭಾಗದ ಮಹಿಳೆಯರು ನಗರ ಪಟ್ಟಣಗಳಿಗೆ ತೆರಳಿ ಫ್ಯಾಶನ್ ಡಿಸೈನ್ ಕಲಿಯುತ್ತಾರೆ. ಸದ್ಯ 20ಕ್ಕೂ ಅಧಿಕ ಕುಲ-ಕಸುಬುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರಂತರ ಒಂದು ತಿಂಗಳವರೆಗೆ ನಡೆಯಲಿರುವ ತರಬೇತಿ ಕಾರ್ಯಾಗಾರದಲ್ಲಿ ತೊಡಗಿಕೋೂಳ್ಳಬೇಕೋಂದು ಸಲಹೆ ನೀಡಿದರು.

ದಾನೇಶ್ವರಿ ಮಹಿಳಾ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೋ ಶಾಂತಾ ಸೊರಗಾಂವಿ ಮಾತನಾಡಿ, ಮಹಿಳೆಯರ ಆಯ್ಕೊು ತಕ್ಕಂತೆ ಉದ್ಯೋಗ ಸೃಷ್ಟಿಗೆ ತರಬೇತಿ ನೀಡಲಾಗುತ್ತಿದೆ. ಈಗ ಗ್ರಾಮೀಣ ಭಾಗದ ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ತರಬೇತಿಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ವಿಶ್ವಜ ಕಾಡದೇವರ, ಚಿದಾನಂದ ಕಾರಜೋಳ, ಕಿರಣ ಆಳಗಿ, ತುಕಾರಾಮ ಕಾಂಬಳೆ, ಪ್ರಿಯಾ ಹುಲಗಬಾಳಿ, ಕಲಾ ಪತ್ತಾರ, ಗೌರಿ ಮಿಳ್ಳಿ, ರಜನಿ ಶೇಠೆ, ಪೂರ್ಣಿಮಾ ಮೊಳೆಗಾಂವಿ, ಕಮಲಾ ಹಾರುಗೇರಿ, ಎಂ. ಗುಡ್ಡಪ್ಪ, ಆರ್.ಬಿ. ಗೊಳಸಂಗಿ, ಬಿ. ಶೋಭಾ, ಶ್ರೀದೇವಿ ಕಾರಜೋಳ, ಶ್ರೀದೇವಿ ಭದ್ರನ್ನವರ, ಸುವರ್ಣಾ ಜಾಡಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net