

ನರೇಗಲ್ಲ: ಮಹಿಳೆ ಸಾಕ್ಷರಳಾದರೆ ಸಾಲದು. ಅವಳು ಡಿಜಿಟಲ್ ಸಾಕ್ಷರಳಾಗಬೇಕು ಎಂದು ಜಿಲ್ಲಾ ಡಿಜಿಟಲ್ ಸಾಕ್ಷರತಾ ಸಂಯೋಜಕ ಬಸವರಾಜ ಬಡಿಗೇರ ಹೇಳಿದರು.
ಸಮೀಪದ ಕೋಟುಮಚಗಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡಿಜಿಟಲ್ ಸಾಕ್ಷರತಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯದ 5000 ಗ್ರಾಪಂ ಅರಿವು ಕೇಂದ್ರಗಳ ಮೂಲಕ ಸಂಜೀವಿನಿ ಒಕ್ಕೂಟದ 6 ಲಕ್ಷ ಜನರಿಗೆ ಮತ್ತು 2 ಲಕ್ಷ ಸಮುದಾಯದವರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ನೀಡಲಾಗುತ್ತಿದೆ ಎಂದರು.
ಪಿಡಿಒ ಸಂತೋಷ ಹೂಗಾರ ಮಾತನಾಡಿ, ಮಹಿಳೆಯರು ಸ್ಮಾರ್ಟ್ ಫೋನ್‌ಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದರು.
ಗ್ರಂಥಪಾಲಕ ಐ. ಎಸ್. ಪತ್ತಾರ ಅವರು ಡಿಜಿಟಲ್ ಸಾಕ್ಷರತೆಯ ತರಬೇತಿ ಪಡೆಯುವುದರಿಂದ ಭವಷ್ಯದಲ್ಲಿ ದೊರಕುವ ಲಾಭಗಳ ಬಗ್ಗೆ ವಿವರಿಸಿದರು. ಗ್ರಾಪಂ ಕಾರ್ಯದರ್ಶಿ ರಾಮನಗೌಡ ನಿಟ್ಟೂರು, ಮಲ್ಲಪ್ಪ ಕರಡಿ, ಒಕ್ಕೂಟದ ಪ್ರತಿನಿಧಿ ಆಸ್ಮಾ ಬುಕ್ಕಿಟಗಾರ, ಶಶಿಕಲಾ ತೊಂಡಿಹಾಳ, ಶಾಂತವ್ವ ಬಡಿಗೇರ, ಗಿರಿಜಾ ಅಲ್ಲಾಪೂರ, ಕಸ್ತೂರಿ ಹೊಂಬಳ, ಅಂಜುಮಾ ಅತ್ತಾರ ಇತರರಿದ್ದರು.