ಹೆಣ್ಣು ತಮ್ಮ ರಕ್ಷಣೆಗೆ ತಾವೇ ಆರಕ್ಷಕರಾಗಲಿ

Let women be their own police officers for their own protection.
ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಡಾ. ವನಿತಾ ತೊರವಿ ಮಾತನಾಡಿದರು. ಡಾ. ವೈ. ತಮ್ಮಣ್ಣ, ಡಾ. ಭಕ್ತಿ ಮಹೇಂದ್ರಕರ ಮತ್ತಿತರರಿದ್ದಾರೆ.
Published on

ವಿಜಯಪುರ: ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ, ಅವಮಾನ, ಅಪಮಾನಗಳು ನಡೆದಾಗ ಇನ್ನೊಬ್ಬರನ್ನು ಆಶ್ರಯಿಸದೇ ರಕ್ಷಣೆಗೆಗಾಗಿ ಸ್ವತಃ ಆರಕ್ಷಕರಾಗಬೇಕು ಎಂದು ಮಕ್ಕಳ ಹಕ್ಕು ಆಯೋಗದ ವಿಶ್ವ ರಾಯಭಾರಿ ಡಾ. ವನಿತಾ ತೊರವಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಮಹಿಳಾ ಸಬಲೀಕರಣ ಕೋಶದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣುಮಕ್ಕಳು ತಮ್ಮ ತಾಯಿ, ಅಕ್ಕ-ತಂಗಿ ಮತ್ತು ಸ್ನೇಹಿತೆಯರಿಗೆ ಸಹಾಯಕರಾಗಬೇಕು. ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿನಿಂದಲೇ ಈ ಜಗದ ಸೃಷ್ಟಿ ಮತ್ತು ಸೊಬಗು ಎಂದರು.

ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹೇಂದ್ರಕರ ಸ್ವಾಗತಿಸಿ ಪರಿಚಯಿಸಿದರು. ಹುಸನಾ ದೇಸಾಯಿ, ರಶ್ಮಿ ಧನ್ಯಾಳ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಿಯಾ ಮೇಲ್ಕುಂದಿ ತಂಡದವರು ಮಹಿಳಾ ಧ್ಯೇಯ ಗೀತೆ ಹಾಡಿದರು. ಅನಿತಾ ಡೊಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net