

ಲಕ್ಷೆ್ಮೕಶ್ವರ: ಸಮಾಜದ ಕಣ್ಣಾಗಿರುವ ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಸುಶಿಕ್ಷಿತ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕು, ಸ್ವಾತಂತ್ರ್ಯ ಸಮಾನತೆ ಪಡೆಯಲು ಶಿಕ್ಷಣವಂತರಾಗಬೇಕು ಎಂದು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರು ಅಬಲೆಯರಲ್ಲ ಸಬಲೆಯರಾಗಿದ್ದು, ಇಂದು ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಜಯಶ್ರೀ ಕೋಲಕಾರ ಮಾತನಾಡಿ, ಮಾನವೀಯತೆಯ ಸಾಕಾರ ಮೂರ್ತಿಯಾದ ಮಹಿಳೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ, ಧರ್ಮದ ಪ್ರತಿರೂಪವೇ ಆಗಿದ್ದಾಳೆ. ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀ ಸಮಾನತೆ, ಸರ್ಕಾರದ ಸವಲತ್ತು, ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆದುಕೊಂಡು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಬೇಕು. ಹೆಣ್ಣು ಮಕ್ಕಳು ಹೆಚ್ಚು ಸಾಕ್ಷರರಾಗುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬಾಳುವ ದೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕಿ ಮಾಲದೇವಿ ದಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ರೇಖಾ ವಡಕಣ್ಣವರ ಸ್ವಾಗತಿಸಿದರು. ಅನ್ನಪೂರ್ಣಾ ಓದುನವರ, ಅಶ್ವಿನಿ ಅಂಕಲಕೋಟಿ, ಸುಲೋಚನಾ ಜವಾಯಿ, ಕಾವ್ಯಾ ದೇಸಾಯಿ, ಮಂಜುಳಾ ಸತ್ಯಪ್ಪನವರ, ಮಂಜುಳಾ ಓದುನವರ, ಜಯಶ್ರೀ ಮೆಳ್ಳಿಗೇರಿ, ನಿರ್ಮಲಾ ಅರಳಿ, ನಂದಾ ಧರ್ವಯತ, ಶೈಲಾ ಆದಿ, ಗಿರಿಜಾ ಮುದಗಲ್, ಸಂಗೀತಾ ಧರ್ವಯತ, ಕಲಾವತಿ ಆವಟೆ, ಶಕುಂತಲಾ ವಡಕಣ್ಣವರ, ನಿರ್ಮಲಾ ವಡಕಣ್ಣವರ, ಜ್ಯೋತಿ ರಾಜೋಳಿ, ದ್ರಾಕ್ಷಾಯಣಿ ಸಾಲಿಮಠ, ಇತರರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿವೃತ್ತ ಮುಖ್ಯೋಪಾಧ್ಯಾಯಿನಿ ಇಂದುಮತಿ ಜಕ್ಕನಗೌಡ್ರ, ಚಿನ್ನದ ಪದಕ ವಿಜೇತೆ ಸಂಗೀತಾ ಲಕ್ಕಪ್ಪನವರ, ಡಿ.ಎಂ. ಪೂಜಾರ ಅವರನ್ನು ಸನ್ಮಾನಿಸಲಾಯಿತು. ಮೈತ್ರಾದೇವಿ ಹಿರೇಮಠ ಹಾಗೂ ಪಾರ್ವತಿ ಕಳ್ಳಿಮಠ ನಿರ್ವಹಿಸಿದರು.