ಮಹಿಳೆಯರು ಮಲ್ಲಮ್ಮಳ ಆದರ್ಶ ಅಳವಡಿಸಿಕೊಳ್ಳಲಿ

PH 10
Published on

ಕಮಲಾಪುರ: ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳೆಲ್ಲವನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ಶ್ರೇಷ್ಠ ಶರಣೆ ಹೇಮರಡ್ಡಿ ಮಲ್ಲಮ್ಮಳಾಗಿದ್ದು, ಇಂದಿನ ಸ್ತಿçÃಯರು ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೋಂತ, ಕಲಮೂಡದ ಶ್ರೀ ಶರಣ ಶಂಕರಲಿAಗ ಮಹಾರಾಜರು ನುಡಿದರು.

ಕಲಮೂಡ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಖಾಂಡ ಉತ್ಸವದಲ್ಲಿ ಆಶೀರ್ವಚ ನೀಡಿ, ಸಂಸಾರವೆAಬ ಸಾಗರದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ, ಎಲ್ಲರಿಗೂ ಮಾದರಿಯಾಗಿ ಜೀವನ ನಡೆಸಬೇಕು ಎಂದರು.

ಪ್ರಮುಖರಾದ ಪ್ರಕಾಶ ರೆಡ್ಡಿ, ಚಂದಾ ರೆಡ್ಡಿ, ಮಾಣಿಕ ರೆಡ್ಡಿ, ಜಗನ್ನಾಥ ರೆಡ್ಡಿ, ಸಂಜುಕುಮಾರ ಪರೀಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net