ನಾವು ಮಾಡುವ ಕಾರ್ಯ ಪ್ರಮಾಣಿಕವಾಗಿರಲಿ

3sri-1 (1)
Published on

ಶೃಂಗೇರಿ: ಭಗವಂತ ಮನುಷ್ಯನಿಗೆ ಬೇಕಾಗಿರುವ ಬುದ್ಧಿಶಕ್ತಿ ಹಾಗೂ ಯುಕ್ತಿಯನ್ನು ನೀಡುವ ಜತೆ ಶಾರೀರಿಕ ಶಕ್ತಿ ನೀಡಿದ್ದಾನೆ. ನಾವು ಮಾಡುವ ಯಾವುದೇ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ನಮಗೆ ಲ ದೊರೆಯುತ್ತದೆ ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಶುಕ್ರವಾರ ಶ್ರೀಶಾರದಾಂಬಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಆಯೋಜಿಸಿದ್ದ ಶ್ರಮಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಾವು ಧರ್ಮ ಮಾರ್ಗದಲ್ಲಿ ನಡೆದರೆ ಭಗವಂತ ಕಷ್ಟಕರವಾದ ಸ್ಥಿತಿಯಲ್ಲಿ ನಮ್ಮ ಕೈಯನ್ನು ಎಂದಿಗೂ ಬಿಡುವುದಿಲ್ಲ. ನಿನ್ನ ಕರ್ಮವನ್ನು ಮಾಡು. ಲವನ್ನು ನಿರೀಕ್ಷೆ ಮಾಡಬೇಡ. ಅದನ್ನು ನಾನು ನೀಡುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ. ಜೀವನದಲ್ಲಿ ನಾವು ಆಶಾಭಾವ ಹೊಂದಬೇಕು.ನಿರಾಸೆ ಬದಿಗಿಟ್ಟು ಭಗವಂತನನ್ನು ನಾವು ಪ್ರಾರ್ಥಿಸಿದರೆ ಅದರ ಲ ನಮಗೆ ಸಿಗುತ್ತದೆ. ನಮಗೆ ಒಬ್ಬ ವ್ಯಕ್ತಿ ಸರಿಯಾದ ಮಾರ್ಗ ತೋರಿಸಿದ್ದರೆ ಆ ಹಾದಿಯಲ್ಲಿ ನಾವು ನಡೆದರೆ ನಮ್ಮ ಕೆಲಸಗಳು ಸುಲಲಿತವಾಗಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net