ಶ್ರೀಮಂತಿಕೆ ಹಣದಲ್ಲಲ್ಲ ಗುಣದಲ್ಲಿರಲಿ

SHIVAGANGA 13
Published on

ಹೊಳಲ್ಕೆರೆ: ಶ್ರೀಮಂತಿಕೆ ಎಂಬುದು ಹಣ, ಅಂತಸ್ಥನಲ್ಲಿ ಇಲ್ಲ. ಅದನ್ನು ನಡೆ-ನುಡಿಯಲ್ಲಿ ಕಾಣಬಹುದಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಹೇಳಿದರು.

ಶಿವಗಂಗ ಕುವೆಂಪು ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಣವಂತರು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದ ಅಭಿವೃದ್ಧಿ ಜತೆಗೆ ಆತ್ಮತೃಪ್ತಿ ಲಭಿಸಲಿದೆ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎ.ಜಯಪ್ಪ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ. ಶ್ರಮದಿಂದ ಓದಿ ಉದ್ಯೋಗ ಗಳಿಸುವ ಮೂಲಕ ಪಾಲಕರು, ಹುಟ್ಟೂರಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಜ್ಜಪ್ಪ ಗುರು, ನಿವೃತ್ತ ಸೈನಿಕರಾದ ಬಸವರಾಜಪ್ಪ, ಅಂಜನಿ, ಮಂಜಪ್ಪ, ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆಗಳ ನೂರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಮಹಿಳೆಯರಿಗೆ ಟೈಲರ್ ಯಂತ್ರ ಟ್ರಸ್ಟ್ ವತಿಯಿಇಂದ ವಿತರಿಸಲಾಯಿತು.

ಕುವೆಂಪು ಟ್ರಸ್ಟ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಡಾ.ಗೀತಾ, ಇಸಿಒ ಕರಿಸಿದ್ದಪ್ಪ, ಈಚಘಟ್ಟ ಸಿಆರ್‌ಪಿ ಮುರಳಿ, ಮುಖ್ಯಶಿಕ್ಷಕರಾದ ರುದ್ರಪ್ಪ, ಶಾಂತಕುಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಚಂದ್ರಮ್ಮ, ಶಿವಗಂಗ ವಸಂತಕುಮಾರ, ಸತೀಶ್, ವಾಣಿ ಗಿರೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net