

ಚಿಕ್ಕೋಡಿ: ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಲಪಡಿಸಲು ವಿಷಯ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರಗಳು ಪ್ರೇರಕವಾಗಿವೆ ಎಂದು ಉಪನಿರ್ದೇಶಕ ಪಿ.ಐ.ಭಂಡಾರೆ ಹೇಳಿದರು.
ಇಲ್ಲಿನ ಎಸ್.ಬಿ.ಮಗದುಮ್ಮ ಪದವಿಪೂರ್ವ ಕಾಲೇಜಿನಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಜ್ಯಶಾಸ್ತ್ರ ಉಪನ್ಯಾಸಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಉಪನ್ಯಾಸಕರಿಗೆ ವಿನೂತನ ಕಲಿಕಾ ವಿಧಾನ ತಿಳಿದುಕೊಂಡು ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಎನ್.ಸವದತ್ತಿ ಮಾತನಾಡಿದರು. ರಾಜ್ಯಶಾಸ್ತ್ರ ವಿಷಯದ ಕೈಪಿಡಿ ಬಿಡುಗಡೆ ಮಾಡಲಾಯಿತು.
ಜಿಎಸ್‌ಇ ಸಂಸ್ಥೆಯ ಚೇರ್ಮನ್ ಎಸ್.ಬಿ. ಮಗದುಮ್ಮ, ವೇದಿಕೆ ಉಪಾಧ್ಯಕ್ಷ ಎಂ.ಜಿ. ದೇವಮಾನೆ, ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ.ರಜಪೂತ, ಎನ್.ಎಸ್ ಕುರಬರ, ಪಿ.ಆರ್. ಮನಗೂಳಿ, ಎಸ್.ಜಿ.ಖೋತ, ಪ್ರಾಂಶುಪಾಲ ವಿ.ಬಿ.ಹಳ್ಳೋಳ್ಳಿ, ಆರ್. ಕೆ. ಮಾಯನ್ನವರ, ಬಿ.ಎಸ್. ಲೋಕುರೆ ಇತರರು ಇದ್ದರು.