ಭವಿಷ್ಯ ರೂಪಿಸಿಕೊಳ್ಳುವ ಜಾಣ್ಮೆಗಳಿಸಿಕೊಳ್ಳಲಿ

2 KMP 04
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಡಾ.ಚಂದ್ರಶೇಖರ ವಿ.ಬಿಳಿಗುಡ್ಡ ಚಾಲನೆ ನೀಡಿದರು. ಪ್ರಮುಖರಾದ ಡಾ.ಕೆ.ಮಹೇಶ, ಡಾ.ಜೆ.ಕೃಷ್ಣ, ಎಂ.ಪಿ.ಬಾಲಾಜಿ, ಎ.ಜಿ.ವೀರಭದ್ರಪ್ಪ, ದೀಪಿಕಾ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಡಿಯಲ್ಲಿ ನಾನಾ ಸಮಿತಿಗಳ ಉದ್ಘಾಟನೆ ಮತ್ತು ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ ಶನಿವಾರ ನಡೆಯಿತು.

ಆಂತರಿಕ ಗುಣಮಟ್ಟ ಭರವಸೆಕೋಶದ ಸಂಚಾಲಕ ಡಾ.ಕೆ.ಮಹೇಶ ಮಾತನಾಡಿ, ವಿದ್ಯಾರ್ಥಿಗಳು ಮೂರು ವರ್ಷದ ಪದವಿ ಶಿಕ್ಷಣದೊಂದಿಗೆ ಪಠ್ಯೇತರ ಅನುಭವಗಳಿಕೆ, ಸಂವಹನ ಕೌಶಲ, ಗ್ರಹಿಸುವಿಕೆ, ಮನನ ಮಾಡಿಕೊಳ್ಳುವಿಕೆಯನ್ನು ಅರಿತುಕೊಳ್ಳಬೇಕಿದೆ. ಹೆಚ್ಚುಗಳಿಕೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳುವ ಜಾಣ್ಮೆಗಳಿಸಬೇಕು ಎಂದರು.

ಪ್ರಾಚಾರ್ಯ ಡಾ.ಚಂದ್ರಶೇಖರ ವಿ.ಬಿಳಿಗುಡ್ಡ ಚಾಲನೆ ನೀಡಿದರು. ಎಲ್ಲ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೆ.ಕೃಷ್ಣ, ಕನ್ನಡ ಉಪನ್ಯಾಸಕ ಡಾ.ಬಸವರಾಜ, ಡಾ.ಲಕ್ಷ್ಮೀಬಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net