ಪರಸ್ಪರರು ಧರ್ಮವನ್ನು ಗೌರವಿಸಲಿ

3 SANDOOR 03
ಸಂಡೂರು ಹಳೇ ಚಪ್ಪರದಳ್ಳಿಯ ಮಸೀದಿಗೆ ನೋಡಬನ್ನಿ ನಮ್ಮೂರ ಮಸೀದಿ ಕಾರ್ಯಕ್ರಮ ನಿಮಿತ್ತ ಶಾಸಕಿ ಅನ್ನಪೂರ್ಣಾ ತುಕಾರಾಮ್ ಭೇಟಿ ನೀಡಿದರು. ಧರ್ಮಗುರು ಅತಾಹುಲ್ ರೆಹಮಾನ್ ಜಾಮಾಯಿ, ಮಸೀದಿ ಅಧ್ಯಕ್ಷ ಕೆ.ಇರ್ಪಾನ್, ಉಪಾಧ್ಯಕ್ಷ ಸೈಯ್ಯದ್ ರಹಮತುಲ್ಲಾ, ಪ್ರಮುಖರಾದ ಬಿ.ಎಂ.ಅತಾವುರ್ ರಹೆಮಾನ್, ಸೈಯದ್ ಎ.ರೆಹಮಾನ್, ಕೆ.ಅಸ್ಲಾಂಬಾಷಾ, ದಾದಾಖಲಂದರ್, ಪುರಸಭೆ ಅಧ್ಯಕ್ಷ ಎಸ್.ಸಿರಾಜುದ್ದೀನ್, ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ ಇತರರಿದ್ದರು.
Published on

ಸಂಡೂರು: ಕೋಮು ಸೌಹಾರ್ದವನ್ನು ಕದಡುವ ಕೆಲಸವನ್ನು ವ್ಯವಸ್ಥಿತವಾಗಿ ಕಾಣದ ಕೈಗಳು ಮಾಡುತ್ತಾ ಬರುತ್ತಿವೆ ಎಂದು

ಶಾಸಕಿ ಅನ್ನಪೂರ್ಣಾ ತುಕಾರಾಮ್ ಹೇಳಿದರು.

ಪಟ್ಟಣದ ಹಳೇ ಚಪ್ಪರದಹಳ್ಳಿಯ ಮಸೀದಿಯಲ್ಲಿ ನೋಡಬನ್ನಿ ನಮ್ಮೂರ ಮಸೀದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಧರ್ಮಗ್ರಂಥಗಳ ಸಾರ ಒಂದೇ ಆಗಿದೆ. ಭಗವದ್ಗೀತೆ, ಖುರಾನ್, ಬೈಬಲ್‌ನಲ್ಲಿ ಪರಸ್ಪರರು ಪ್ರೀತಿ, ಪ್ರೇಮ, ಶಾಂತಿ ಸೌಹಾರ್ದಯುತವಾಗಿ ಬಾಳಬೇಕು ಎಂದು ಹೇಳಲಾಗಿದೆ. ಪರಸ್ಪರರು ಧರ್ಮವನ್ನು ಗೌರವಿಸಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net