ದಾನ, ಧರ್ಮ ರೂಢಿಸಿಕೊಳ್ಳಲಿ

24ARATAL1
Published on

ಅರಟಾಳ: ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರೆ, ಬೇಡಿದ ವರ ಮತ್ತು ಪುಣ್ಯ ಲಭಿಸುತ್ತದೆ. ಒಂದು ತಿಂಗಳು ಮಾಡುವ ಶ್ರಾವಣ ಭಕ್ತಿ, ಶ್ರೇಷ್ಠ ಭಕ್ತಿ ಎಂದು ವೀರೇಶ ದೇವರು ಹೇಳಿದರು.

ಗ್ರಾಮದಲ್ಲಿ ಶನಿವಾರ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ಶ್ರಾವಣ ಮಾಸದ ತಿಂಗಳ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಹಣ, ಆಸ್ತಿ ಗಳಿಸುವುದಷ್ಟೆ ಅಲ್ಲದೆ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ&ತಾಯಿ ಕರ್ತವ್ಯ. ಮಹಾತ್ಮರು, ಸಂತರು, ಶರಣರು ಬಾಳಿ ಬೆಳಗಿದ ಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯರು ಎಂದರು.

ಡಾ.ಭೀಮಾಶಂಕರ ಶರಣರು ಮಾತನಾಡಿ, ದಾನ, ಧರ್ಮ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಪುಣ್ಯ ಲಭಿಸುತ್ತದೆ ಎಂದರು.

ಬಾಡಗಿ ಸಂಗಯ್ಯ ಸ್ವಾಮೀಜಿ, ಅಡಹಳ್ಳಟ್ಟಿ ಭೀಮಾಶಂಕರ ಶರಣರು, ಶರಣಯ್ಯ ಹಿರೇಮಠ, ಸದಾನಂದ ಮಾಡಗ್ಯಾಳ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮಪ್ಪ ಭಂಡಾರಿ, ಅರ್ಚಕ ಮಲ್ಲಿಕಾರ್ಜುನ ಭಂಡಾರಿ, ಕಲ್ಲಪ್ಪ ಪಾಟೀಲ, ಗಣಪತಿ ಭಂಡಾರಿ, ಬಸವರಾಜ ಭಂಡಾರಿ, ಸಿದ್ದಪ್ಪ ಹಿರೇಕುರಬರ, ಶಂಕರ ಮಾಳಿ, ಮಲ್ಲಿಕಾರ್ಜುನ ಪಾಟೀಲ, ಮುತ್ತಪ್ಪ ಭಂಡಾರಿ, ರಮೇಶ ವಡ್ಡರ, ಅಪ್ಪಾಸಾಹೇಬ ಪಾಟೀಲ ಇತರರಿದ್ದರು. ಚನ್ನಬಸು ಬಿರಾದಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net