ಪಾಲಕರನ್ನು ಗೌರವದಿಂದ ನೋಡಲಿ

9Athanigrameen2
Published on

ಅಥಣಿ ಗ್ರಾಮೀಣ: ಪಾಲಕರನ್ನು ಆರೈಕೆ ಮಾಡದೆ ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ಬೇಸರದ ಸಂಗತಿ ಎಂದು ಕಕಮರಿ ಶ್ರೀ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗಜಂಗಮ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಂಗಪ್ಪ ಕಲಮಡಿ ಶರಣರ 21ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿ, ಬದುಕಿನುದ್ದಕ್ಕೂ ಸಲುಹಿದ ಜೀವಗಳಿಗೆ ಪ್ರೀತಿ, ತುತ್ತು ಅನ್ನ ನೀಡುವುದು ಕರ್ತವ್ಯ ಎನ್ನುವುದನ್ನು ಮಕ್ಕಳು ಮರೆಯಬಾರದೆಂದರು.

ಅಡಹಳ್ಳಟ್ಟಿ ಮಲ್ಲಿಕಾರ್ಜುನ ಶರಣರು, ಯಲಿಹಡಲಗಿಯ ಬಾಳು ಶರಣರು, ಅಪ್ಪಾಸಾಹೇಬ ಶರಣರು ಮಾತನಾಡಿದರು. ಬಾವುರಾಜ ಕಲಮಡಿ ದಾಸಬೋಧ ಪಠಣ ಮಾಡಿದರು. ರಾಮು ಕಲಮಡಿ, ಬಸವಂತ ಕಲಮಡಿ, ಶಂಕರ ಐನಾಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷ

ಬಸವಂತ ಗುಡ್ಡಾಪುರ, ಗಂಗಪ್ಪ ಸಾತಣ್ಣವರ, ಶ್ರೀಶೈಲ ಖೋತ, ರಮೇಶ ಕೋಟ್ಯಾಳ, ಕಲ್ಮೇಶ ಕಲಮಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net