

ನರಗುಂದ: ಸಂವಿಧಾನದ ಸಂದೇಶವನ್ನರಿತು ಎಲ್ಲರೂ ಸಮಾನತೆಯಿಂದ ಜೀವನ ನಡೆಸಿದರೆ ದೇಶ ಮತ್ತಷ್ಟು ಸುಭದ್ರತೆಯಿಂದ ಶಾಂತಿಯ ನಾಡಾಗಿ ಹೊರಹೊಮ್ಮಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಾಡಳಿತದಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಎನ್ಸಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಯಾವುದೇ ಜನಾಂಗದ ಆಚಾರ ವಿಚಾರಗಳಿಗೆ ಧಕ್ಕೆ ಭಾರದಂತೆ ಸಂವಿಧಾನ ನಮಗೆಲ್ಲ ದಾರಿದೀಪವಾಗಿದೆ ಎಂದರು.
ಕ್ರೀಡೆ, ಶೈಕ್ಷಣಿಕ, ಸಾಮಾಜಿಕ ಹಾಗೂ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆಗೈದವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ತಾಪಂ ಇಒ ಎಸ್.ಕೆ. ಇನಾಮದಾರ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಬಿಇಒ ಡಾ. ಗುರುನಾಥ ಹೂಗಾರ, ಸಿಪಿಐ ಮಂಜುನಾಥ ನಡುವಿನಮನಿ, ಎ.ಎಂ. ಹುಡೇದ, ಚಂಬಣ್ಣ ವಾಳದ, ಆರ್.ಬಿ. ಅಳಗವಾಡಿ, ವಸಂತ ಜೋಗಣ್ಣವರ, ಚಂದ್ರು ದಂಡಿನ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಹನುಮಂತ ಹವಾಲ್ದಾರ, ವಿಠ್ಠಲ ಹವಾಲ್ದಾರ, ಎನ್.ಆರ್. ನಿಡಗುಂದಿ, ಬಿ.ಎಫ್. ಮಜ್ಜಗಿ, ಬಿ.ಎಂ. ಬಡಿಗೇರ, ಶಂಕರ ಪಲ್ಟನಕರ್, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಇತರರು ಉಪಸ್ಥಿತರಿದ್ದರು. ಗಿರೀಶ ದಾಸದ ನಿರ್ವಹಿಸಿದರು.