ಆದರ್ಶ ವ್ಯಕ್ತಿಗಳಾಗಿ ಬದುಕಲಿ

SGN SCHOOL
Published on

ಶಿಗ್ಗಾಂವಿ: ವಿದ್ಯಾರ್ಥಿಗಳು ಸಂಸ್ಕಾರ ಮತ್ತು ಶಿಕ್ಷಣ ಕಲಿತು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದು ನಿವೃತ್ತ ನ್ಯಾಯಧೀಶ ಮಲ್ಲಿಕಾರ್ಜುನ ಸಂಶಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1ರಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 176 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಶಾಲೆಯಲ್ಲಿ ಅನೇಕರು ಕಲಿತು ಶಿಕ್ಷಕರಾಗಿ, ಸರ್ಕಾರದ ಉನ್ನತ ಹುದ್ದೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಾನೂ 1967ರಲ್ಲಿ ಇದೇ ಶಾಲೆಯಲ್ಲಿ ಕಲಿತು ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿ, ನೆಮ್ಮದಿಯಿಂದ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಎಂದರು.

ವಿರಕ್ತಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಎಂ. ದೇವಕಿಗೌಡ್ರ ವರದಿ ವಾಚಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪುರಸಭೆ ಸದಸ್ಯರಾದ ಪರುಶರಾಮ ಸೊನ್ನದ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಮಹಾರುದ್ರಪ್ಪ ಕೊಡ್ಲಿವಾಡ, ಪವಿತ್ರಾ ಹಾವೇರಿ, ಸಾವಿತ್ರಿ ಕಮ್ಮಾರ, ರಾಜು ಬಿಂದ್ಲಿ, ಪ್ರಕಾಶ ಬಾವಿಕಟ್ಟಿ, ಸಂಕಪ್ಪ ಗಂಟೆಪ್ಪನವರ, ಮಂಜುನಾಥ ಬಂಡಿವಡ್ಡರ, ಹನುಮಂತಪ್ಪ ಧಾರವಾಡ, ರೇಖಾ ಪೂಜಾರ, ಮಮತಾ ಭಜಂತ್ರಿ, ಅಶೋಕ ಓಲೇಕಾರ, ಸಂಜೀವ ಮನ್ನಣ್ಣವರ, ವಿ.ಎಸ್. ಭದ್ರಶೆಟ್ಟಿ, ಹೇಮಾ ಪೂಜಾರ, ಧರ್ಮರಾಜ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net