ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿ

18 MM HALLI 01
ಮರಿಯಮ್ಮನಹಳ್ಳಿ ಸಮೀಪದ ವ್ಯಾಸನಕೆರೆ ಗ್ರಾಮದಲ್ಲಿ ಬಿಎಂಎಂ ಕಂಪನಿಯಿಂದ ಸಾರ್ವಜನಿಕ ಸಮುದಾಯ ಭವನದ ಭೂಮಿಪೂಜೆಯನ್ನು ಮಾನವ ಸಂಪನ್ಮೂಲ ವ್ಯವಸ್ಥಾಪಕ ಗಣೇಶ ಹೆಗಡೆ ನೆರವೇರಿಸಿದರು. ಸಂಸ್ಥೆಯ ಅಧಿಕಾರಿಗಳಾದ ಗಿರೀಶ ಕಾಕನೂರ, ಅರುಣ ಕುಮಾರ, ಭೋಜರಾಜು, ಮಂಜುನಾಥ ಚಿಕ್‌ಮಠ, ಮಲ್ಲಿಕಾರ್ಜುನ, ವೆಂಕಟೇಶ, ಸಿ.ಎ.ಗಾಳೆಪ್ಪ, ಎಲ್ಲಪ್ಪ, ಮಜ್ಗಿ ನಾಗರಾಜ ಇತರರಿದ್ದರು.
Published on

ಮರಿಯಮ್ಮನಹಳ್ಳಿ: ಮದುವೆ ಸೇರಿ ಇನ್ನಿತರ ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಎಂಎಂ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಗಣೇಶ ಹೆಗಡೆ ಹೇಳಿದರು.

ಸಮೀಪದ ವ್ಯಾಸನಕೆರೆ ಗ್ರಾಮದಲ್ಲಿ ಬಿಎಂಎಂ ಕಂಪನಿಯ ಸಾರ್ವಜನಿಕ ಬಳಕೆ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ಸೇವೆ ಮಾಡುವ ಧ್ಯೇಯವನ್ನು ಬಿಎಂಎ ಕಂಪನಿ ಹೊಂದಿದೆ. ಸೌಹಾರ್ದತೆ, ಸುಖ-ಶಾಂತಿ, ಸರ್ವರು ಪರಸ್ಪರ ಭಿನ್ನಾಭಿಪ್ರಾಯ ಹೋಗಲಾಡಿಸಿ ಸಾಮಾಜಿಕ ಜೀವನದಲ್ಲಿ ನಾವೆಲ್ಲರೂ ಒಂದೇ ಎಂಬ ಮಹತ್ವಾಕಾಂಕ್ಷೆ ಹೊಂದಿದಾಗ ಇಡೀ ಗ್ರಾಮವೇ ಭಾವೈಕ್ಯ ತಾಣವಾಗುತ್ತದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ರಚನಾತ್ಮಕವಾಗಿ ತೊಡಗಿಸಿಕೊಂಡಾಗ, ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗುತ್ತವೆ.

ಗ್ರಾಮೀಣ ಪ್ರದೇಶಗಳಲ್ಲಿ ಶುಭ ಕಾರ್ಯಗಳಿಗೆ ಸರಿಯಾದ ವ್ಯವಸ್ಥೆ ಇಲ್ಲ.

ಸಭೆ-ಸಮಾರಂಭ, ಮದುವೆ, ಜಾತ್ರೆ-ಉತ್ಸವ, ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಲು ಸಮುದಾಯ ಭವನಗಳು ಸಹಕಾರಿಯಾಗಿವೆ. ಗ್ರಾಮೀಣ ಪ್ರದೇಶಗಳು ವೈವಿಧ್ಯ ಮತ್ತು ವೈಶಿಷ್ಟ್ಯತೆಗಳ ಆಗರವಾಗಲು ಅಲ್ಲಿನ ಮೂಲಭೂತ ಸೌಕರ್ಯಗಳು ಕಾರಣವಾಗುತ್ತವೆ. ಇಂದಿಗೂ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ, ಸರಿಯಾದ ರಸ್ತೆಗಳು, ಬೀದಿ ದೀಪಗಳು, ಶುದ್ಧ ಕುಡಿಯುವ ನೀರಿನ ತೊಂದರೆ ಇದೆ. ಗ್ರಾಮೀಣ ಜನತೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net