ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲಿ

28Kush01
ಕುಶಾಲನಗರ ತಾಲೂಕು ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಕುಲಗುರು ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಅಂಗವಾಗಿ ಸಮಾಜದವರಿಗೆ ತಾತಯ್ಯ ಅವರ ಭಾವಚಿತ್ರವನ್ನು ಗಣ್ಯರು ವಿತರಿಸಿದರು. ಆರ್.ಬಾಬು. ಬಾಲು, ಗಣೇಶ್ ಸ್ವಾಮಿ, ಗಣೇಶ್, ಪುಂಡರಿ ಇತರರಿದ್ದರು.
Published on

ಕುಶಾಲನಗರ: ಸಮಾಜದ ಕಡುಬಡ ಕುಟುಂಬಗಳಿಗೆ ನೆರವು ನೀಡುವ ಕೆಲಸ ಬಲಿಜ ಸಂಘದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘದ ಸದಸ್ಯರಾಗಬೇಕಿದೆ ಎಂದು ತಾಲೂಕು ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ಆರ್.ಬಾಬು ಕರೆ ಕೊಟ್ಟರು.

ಕುಶಾಲನಗರ ತಾಲೂಕು ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಮಾಹಾನ್ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 900ಕ್ಕೂ ಹೆಚ್ಚು ಬಲಿಜ ಕುಟುಂಬಗಳಿದ್ದು, ಪ್ರತಿ ವರ್ಷವೂ ಕುಲಗುರುಗಳ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದನ್ನು ಸಮಾಜದವರು ಮುಂದುವರಿಸಿಕೊಂಡು ಹೋಗಬೇಕು. ಸಂಘದ ಸದಸ್ಯರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದರೊಂದಿಗೆ ಸಮಾಜ ಬಾಂಧವರು ರಾಜಕೀಯವಾಗಿಯೂ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು.

ಸಂಘದ ಸದಸ್ಯೆ ಕವಿತಾ ದಯಾನಂದ್ ಮಾತನಾಡಿದರು. ಜಯಂತಿ ಅಂಗವಾಗಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಅವರ ಭಾವಚಿತ್ರಗಳನ್ನು ಸಂಘದ ಸದಸ್ಯರ ಕುಟುಂಬಗಳಿಗೆ ವಿತರಿಸಲಾಯಿತು.

ಸಂಘದ ಗೌರವಾಧ್ಯಕ್ಷ ಬಾಲು ದಯಾನಂದ, ಉಪಾಧ್ಯಕ್ಷ ಬೈಲಕುಪ್ಪೆ ಗಣೇಶ್‌ಸ್ವಾಮಿ, ಕಾರ್ಯದರ್ಶಿ ನಿರಂಜನ್, ಖಜಾಂಚಿ ಸತೀಶ್, ನಿರ್ದೇಶಕರಾದ ಜಯರಾಂ, ಜಗದೀಶ್, ಕವಿತಾ, ಮದನ್, ಧರ್ಮಣ್ಣ, ಕಿರಣ್, ತುಳಸಿ ಮೊದಲಾದವರಿದ್ದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net