ಬಡವರ ಮಕ್ಕಳ ವ್ಯಾಸಂಗಕ್ಕೆ ನೆರವಾಗಲಿ

9RAM2
Published on

ರಾಮದುರ್ಗ: ಹಳೇ ವಿದ್ಯಾರ್ಥಿಗಳು ಇಳಿ ವಯಸ್ಸಿನ ಗುರುಗಳನ್ನು ಗೌರವಿಸಿ ಸಂಭ್ರಮಿಸುವುದು ಹೆಮ್ಮೆಯಾಗಿದೆ. ಅವರೆಲ್ಲ ಒಂದಾಗಿ ಬಡವರ ಮಕ್ಕಳ ವ್ಯಾಸಂಗಕ್ಕೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಬೇಕು ಎಂದು ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ. ದಾಮೋದರ ಹೇಳಿದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿಡಿ ಹಲ್ಯಾಳ ಪ್ರೌಢಶಾಲೆಯ 2000ದಿಂದ 2003ನೇ ಬ್ಯಾಚಿನ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಎಸ್. ಜೋಗಳೆ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ನಿವತ್ತ ಮುಖ್ಯಶಿಕ್ಷಕ ವಿ.ಜಿ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ಎನ್.ಜಿ. ಹುದ್ದಾರ, ಎಚ್.ಪಿ. ಶೇಷಪ್ಪನವರ, ಎಸ್.ಡಿ ಅರವಟಗಿ, ಎಸ್.ಆರ್. ಪುರುಷಾಕಾರಿ, ವಿ.ಬಿ. ಜಂಬಗಿ, ಪಿ.ಬಿ. ಪೂಜಾರ, ಐ.ಬಿ. ಕೋನಿಮನಿ, ಎನ್.ಬಿ. ಜಾಲಿಹಾಳ, ಎಸ್.ಎಸ್. ಶೆಟ್ಟರ ಸೇರಿ ಇತರರನ್ನು ಸತ್ಕರಿಸಲಾಯಿತು. ಮುಜಾರ್ ಗಡ್ಡಿ, ಅಶ್ವಿನಿ ಕರಜಗಾರ, ಎಸ್.ಎಲ್. ಪೆಟ್ಲೂರ, ಇಲಿಹಾಸ್ ಬಹದ್ದೂರಖಾನ್, ಮಂಜು ಕೊಳದೂರ, ಎಂ.ಸಿ. ಮುಳಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net