

ರಾಯಬಾಗ: ಜೀವನದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಸಂತೋಷ, ಸುಂದರ ಮತ್ತು ನೆಮ್ಮದಿ
ಜೀವನ ನಡೆಸಬೇಕು ಎಂದು ಜಮಖಂಡಿ ಓಲೆಮಠದ ಆನಂದ ದೇವರು ಹೇಳಿದರು.
ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಹೀರಾಬಾಯಿ ಚೌಗುಲೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬದುಕು ರೂಪಿಸುವ ಶಿಕ್ಷಕರಿಗೆ ಗೌರವ ನೀಡಿ, ಅವರ ಮಾರ್ಗದರ್ಶನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಸಹಾಯಕ ಲಕ್ಷ್ಮಣ ಮಾಳಗಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ, ಸದಾಶಿವ ತೋರಿ, ವಿನಯ ಚೌಗುಲೆ, ಉಪನ್ಯಾಸಕರಾದ ಪಿ.ಡಿ.ಲಂಗೋಟೆ, ಶಿವಾಜಿ ಭೋಯಿ, ಕಾವೇರಿ ಪಾಟೀಲ, ಗಜಾನನ ಪೂಜಾರಿ, ಸಂತೋಷಕುಮಾರ ಲಮಾಣಿ, ಕುಮಾರ ಭಜಂತ್ರಿ, ಅಪ್ಪು ಕಾಂಬಳೆ,
ಆಶಾ ಕಾಂಬಳೆ, ಸುನೀಲ ಕೋಳಿಗುಡ್ಡೆ, ಎಸ್.ಜಿ.ಶಿಂಧೆ, ರೋಹನ ವಗ್ಗರ, ಸುಮಿತ್ರಾ ಅಲಕನೂರೆ, ಪ್ರಾಚಾರ್ಯ ಎಸ್.ಎಸ್.ದಿಗ್ಗೆವಾಡಿ ಸ್ವಾಗತಿಸಿದರು.