ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ

4..1
ಅನಂತಪುರ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯರು ಬಿರಾದಾರ ಕಲೆಕ್ಷನ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ರಾವಸಾಹೇಬ ಬಿರಾದಾರ ಇದ್ದರು.
Published on

ಸಂಬರಗಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಅನಂತಪುರ ಗ್ರಾಮದ ಬಿರಾದರ ಕಲೆಕ್ಷನ್‌ನಲ್ಲಿ ಸಾಮಾನ್ಯ ಬಡ ಕುಟುಂಬವೂ ಅತಿ ಕಡಿಮೆ ದರದಲ್ಲಿ ಬಟ್ಟೆ ಖರೀದಿ ಮಾಡಬಹುದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಅನಂತಪುರ ಗ್ರಾಮದಲ್ಲಿ ಶನಿವಾರ ಬಿರಾದಾರ ಕಲೆಕ್ಷನ್ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸಾಮಾನ್ಯ ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು. ಗ್ರಾಹಕರಿಗೆ ಯೋಗ್ಯ ದರದಲ್ಲಿ ಬಟ್ಟೆ ನೀಡಬೇಕು. ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸಿದರೆ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಿರಾದರ ಕಲೆಕ್ಷನ್ ಆರಂಭ ಆಗಿರುವುದರಿಂದ ಬಡ ನಾಗರಿಕರಿಗೆ ಅನುಕೂಲವಾಗುತ್ತದೆ.

ಬಟ್ಟೆಗಳಿಗೆ ಕಡಿಮೆ ದರ ಇರುವುದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ ಎಂದರು.

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ರಾವಸಾಹೇಬ ಬಿರಾದಾರ, ರಶ್ಮಿ ಬಿರಾದಾರ, ಕುಸುಮಾ ಬಿರಾದಾರ, ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕುಮಾರ ಪಾಟೀಲ, ಅಣ್ಣಾಸಾಬ ಜಾಬಕೊಂಡ, ಸಂಗಪ್ಪ ಜಾಬಗೌಡರ, ಶಿವಾನಂದ ಖೋತ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ, ಗ್ರಾಪಂ ಸದಸ್ಯರಾದ ಪರಶುರಾಮ ಅಥಣಿಕರ, ಗುರುರಾಜ ಚೌಗಲಾ, ಗುರಪ್ಪ ಜತ್ತಿ, ರಾಜು ಮದಬಾವಿ, ಅಸ್ಲಂ ಮಕಾನದಾರ, ಅಶೋಕ ಅಥಣಿಕರ, ಅಶೋಕ ಜಾಬಗೌಡರ, ರಾಕೇಶ ಬಿರಾದಾರ, ಎಡಿಎ ಪುನೀತ್ ಪಾಸೋಡಿ, ತಮ್ಮಣ್ಣ ದೇಶಿಂಗೆ, ಮುರಗೆಪ್ಪ ಮಾಕೊಗೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net