ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಲಿ

26Harugeri1
Published on

ಹಾರೂಗೇರಿ: ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಿದರೆ ಸಾಲದು ಅವರ ಆದರ್ಶ ಪಾಲಿಸಬೇಕು ಎಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.

ಪಟ್ಟಣದ ರಾಯಬಾಗ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ವೃತ್ತ ನಾಮಕರಣ ಹಾಗೂ ರಾಯಣ್ಣನ ಕಂಚಿನ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾಂಗ್ರೆಸ್ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಮಾತನಾಡಿ, ಒಂದೇ ಸಮಾಜದ ವ್ಯಕ್ತಿಯಾಗದೆ ಎಲ್ಲ ಸಮಾಜಕ್ಕೂ ಸಂಗೊಳ್ಳಿ ರಾಯಣ್ಣರು ಆದರ್ಶವಾಗಿದ್ದಾರೆ. ದೇಶಕ್ಕೆ ಕೊಡುಗೆ ನೀಡುವ ಮೂಲಕ ರಾಯಣ್ಣರಂತೆ ಅಜರಾಮರರಾಗಬೇಕು ಎಂದರು.

ಮಾಜಿ ಶಾಸಕ ಪಿ.ರಾಜೀವ ಮಾತನಾಡಿದರು. ದಿ.ಆದಪ್ಪ ಕರೆಪ್ಪ ಜಂಬಗಿ ಮತ್ತು ಶ್ರೀಮತಿ ಗಂಗವ್ವ ಆದಪ್ಪ ಜಂಬಗಿಯವರ ಸ್ಮರಣಾರ್ಥವಾಗಿ 17ಲಕ್ಷ ರೂ. ಸ್ವಂತ ವೆಚ್ಚದಲ್ಲಿ ಕಂಚಿನ ಮೂರ್ತಿ ಮಾಡಿಸಿದ ಮಗ ಬಾಲಕೃಷ್ಣ ಜಂಬಗಿ ದಂಪತಿಗಳಿಗೆ ಪೂಜ್ಯರು ಮತ್ತು ಗಣ್ಯರು ಸನ್ಮಾನಿಸಿದರು.

ಶಾಸಕ ಮಹೇಂದ್ರ ತಮ್ಮಣ್ಣವರ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಲಕ್ಷ್ಮಣರಾವ್ ಚಿಂಗಳೆ, ಬ್ಯಾರಿಸ್ಟರ್ ಅಮರಸಿಂಹ ಪಾಟೀಲ, ನಾಗಪ್ಪ ಕಂಟಿಕಾರ, ಡಿ.ಎಸ್. ನಾಯಿಕ, ಎಲ್.ಎಸ್.ಜಂಬಗಿ, ಸದಾಶಿವ ದೇಸಿಂಗೆ, ಎನ್.ಎಸ್.ಚೌಗಲಾ, ರಾಮಣ್ಣ ಗಸ್ತಿ, ತಹಸೀಲ್ದಾರ್ ಸನಮುರಿ, ಪಿಎಸ್‌ಐ ಮಾಳಪ್ಪ ಪೂಜಾರಿ, ವಸಂತ ಅಲಖನೂರ, ಈರನಗೌಡ ಪಾಟೀಲ, ಸುರೇಶ ಐಹೊಳೆ, ಮಂಜುಳಾ ಗಲಗಲಿ ಇತರರಿದ್ದರು. ಬಸವರಾಜ ಮುಗಳಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಪ್ಪ ಬನಾಜ ಸ್ವಾಗತಿಸಿದರು. ಬಿ.ಎಲ್.ಘಂಟಿ ನಿರೂಪಿಸಿದರು, ಟಿ.ಎಸ್.ವಂಟಗೂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net