

ಹಳಿಯಾಳ: ವಿದ್ಯಾರ್ಥಿಗಳು ವಿನೂತನ ಆವಿಷ್ಕಾರಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶಾಸಕ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.
ಬುಧವಾರ ಪಟ್ಟಣದ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಾಂಸ್ಕೃತಿಕ ಉತ್ಸವ ಉಮಂಗ್- 2025 ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತ ಬಂದಿರುವ ವಿಡಿಐಟಿಯ ಕಾರ್ಯವೈಖರಿ ಶ್ಲಾಘಿಸಿದರು.
ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ ಕುಲಕರ್ಣಿ, ಕೆಎಲ್ಎಸ್ ಸದಸ್ಯ ಆರ್.ಎಸ್. ಮುತಾಲಿಕ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಸಿಪಿಐ ಜಯಪಾಲ್ ಪಾಟೀಲ, ವಿಆರ್ಡಿಎಂ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.
ಉಮಂಗ್- 2025ರ ಪ್ರಯುಕ್ತ ಮೇ 13 ಹಾಗೂ 14ರಂದು ನೃತ್ಯ ಹಾಗೂ ಸಂಗೀತ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಹಾಗೂ ತಂಡದವರು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮವನ್ನು ಡಾ. ಮಹೇಂದ್ರ ದೀಕ್ಷಿತ್, ಪೊ›. ರಾಜೇಶ್ವರಿ ಎನ್. ಡಾ. ಪೂರ್ಣಿಮಾ ರಾಯ್ಕರ್, ಡಾ. ಶ್ರೀನಿವಾಸ, ದೇಶಪಾಂಡೆ, ಪೊ›. ಸುಧೀರ ಕುಲಕರ್ಣಿ ಸಂಯೋಜಿಸಿದ್ದರು.