

ಗೋಕಾಕ: ಭಾರತೀಯ ಸಂಸತಿಗೆ ಜಾಗತಿಕ ಮನ್ನಣೆ ಇದ್ದು, ಆ ಪರಂಪರೆಯನ್ನು ನಾವೆಲ್ಲರೂ ಮುಂದುವರಿಸೋಣ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಸಮೀಪದ ಗುರು ಮಹದೇವಾಶ್ರಮದಲ್ಲಿ ಕಪರಟ್ಟಿ&ಕಳ್ಳಿಗುದ್ದಿಯ ಪವಾಡ ಪುರುಷ ಗುರುಮಹಾದೇವ ಅಜ್ಜನ 87ನೇ ಜಯಂತಿ ಹಾಗೂ ಕಾಯಕಯೋಗಿ ಮತ್ತು ಕನ್ನಡ ಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬುಧವಾರ ಕನ್ನಡ ಜ್ಯೋತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಮ್ಮ ಸಂಸತಿಯನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ. ಮಕ್ಕಳಲ್ಲೂ ಸಂಸತಿಯ ಜಾಗತಿ ಮೂಡಿಸಿ ಸುಸಂಸತರನ್ನಾಗಿ ಮಾಡುವಂತೆ ಕರೆ ನೀಡಿದರು.
ಕಾಯಕಯೋಗಿ ಪ್ರಶಸ್ತಿಯನ್ನು ಮಂಗಳೂರಿನ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮುನವಳ್ಳಿ ಮುರುರಾಜೇಂದ್ರ ಸ್ವಾಮೀಜಿಗೆ ಪ್ರದಾನ ಮಾಡಲಾಯಿತು. 108 ಮಾಜಿ ಸೆನಿಕರನ್ನು ಸತ್ಕರಿಸಲಾಯಿತು. ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ, ಮರಡಿಮಠದ ಪವಾಡೇಶ್ವರ ಸ್ವಾಮೀಜಿ, ಹೊಸಯರಗುದ್ರಿ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ಕಪರಟ್ಟಿ&ಕಳ್ಳಿಗುದ್ದಿಯ ಬಸವರಾಜ ಸ್ವಾಮೀಜಿ, ಮಾಜಿ ಶಾಸಕ ಎಂ.ಎಲ್. ಮುತ್ತೆನ್ನವರ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯ ಸುಭಾಸ ಪಾಟೀಲ, ನಗರ ಮಂಡಲ ಅಧ್ಯ ಭೀಮಶಿ ಭರಮನ್ನವರ, ಮುಖಂಡರಾದ ಮಲ್ಲಿಕಾರ್ಜುನ ಈಟಿ ಇತರರು ಇದ್ದರು.