ನಾವೆಲ್ಲರೂ ಒಗ್ಗಟ್ಟಾಗಿರೋಣ

26Raibag1
Published on

ರಾಯಬಾಗ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಭಾರತದ ಎಲ್ಲ ನಾಗರಿಕರಿಗೆ ಸಮಾನತೆ ಕಲ್ಪಿಸಿ ನ್ಯಾಯ ಒದಗಿಸಿದ್ದಾರೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ತಾಲೂಕು ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶ ಅನೇಕ ಭಾಷೆ, ಧರ್ಮ, ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿದ್ದರೂ, ನಾವೆಲ್ಲರೂ ಒಂದೇ ಎಂದು ಭಾವನೆಯಿಂದ ಕೂಡಿ ಬಾಳುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ತಹಸೀಲ್ದಾರ್ ಸುರೇಶ ಮುಂಜೆ ಧ್ವಜಾರೋಹಣ ನೆರವೇರಿಸಿದರು. ಪಪಂ ಅಧ್ಯಕ್ಷ ಅಶೋಕ ಅಂಗಡಿ, ತಾಪಂ ಇಒ ಅರುಣ ಮಾಚಕನೂರ, ಸಿಪಿಐ ಬಿ.ಎಸ್.ಮಂಟೂರ, ಬಿಇಒ ಬಸವರಾಜಪ್ಪ ಆರ್., ಸಮಾಜ ಕಲ್ಯಾಣಾಧಿಕಾರಿ ವಿ.ಎಸ್.ಚಂದರಗಿ, ಲೋಕೋಪಯೋಗಿ ಎಇಇ ಆರ್.ಬಿ. ಮನವಡ್ಡರ, ಟಿಎಚ್‌ಒ ಡಾ.ಎಸ್.ಎಂ.ಪಾಟೀಲ, ಕೃಷಿ ಅಧಿಕಾರಿ ವಿನೋದ ಮಾವರಕರ, ಪರಮಾನಂದ ಮಂಗಸೂಳಿ, ಭಾರತಿ ಕಾಂಬಳೆ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಬಸವರಾಜ ಕಾಂಬಳೆ, ವಿನಾಯಕ ಭಾಟೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ವಸಂತ ಹೊಸಮನಿ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇತರರಿದ್ದರು. ದೈಹಿಕ ಶಿಕ್ಷಣ ಪರೀವಿಕ್ಷಕ ಎಂ.ಪಿ.ಜಿರಗ್ಯಾಳ ನಿರೂಪಿಸಿದರು. ಪಿ.ಎಸ್.ಶಾರಬಿದ್ರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net