ಸೂಫಿ ಸಂತರ ಮಾರ್ಗದಲ್ಲಿ ಮುನ್ನಡೆಯೋಣ

30..6
ಬೈಲಹೊಂಗಲ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಸಂದಲ್ ಮತ್ತು ಉರುಸ್ ಸಡಗರದಿಂದ ಜರುಗಿತು. ಲತೀಫ್ ಪೀರಾ ತೊಲಗಿ, ಅಬ್ದುಲ್‌ರಜಾಕ್ ಖಾದ್ರಿ ವ ಹಾಷಮಿ, ರಫೀಕ್ ಬಡೇಘರ್ ಇತರರಿದ್ದರು.
Published on

ಬೈಲಹೊಂಗಲ: ಪಟ್ಟಣದ ಬಾಗವಾನ ಚಾಳ್‌ನಲ್ಲಿರುವ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಈಚೆಗೆ ಸಡಗರ, ಸಂಭ್ರಮದಿಂದ ಜರುಗಿತು.

ಮುಸ್ಲಿಂ ಧರ್ಮ ಗುರು ಲತ್ೀ ಪೀರಾ ತೊಲಗಿ ಮಾತನಾಡಿ, ಭಾರತ ದೇಶ ಮಹಾನ್ ಯೋಗಿಗಳು, ಸೂಫಿ ಸಂತರು ನಡೆದಾಡಿದ ಪುಣ್ಯ ನೆಲವಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.


ಸಾನ್ನಿಧ್ಯ ವಹಿಸಿದ್ದ ಸತ್ತೂರಿನ ಹಜರತ್ ಪೀರೇ ತರಿಕತ್ ಸೂಫೀ ಅಬ್ದುಲ್‌ರಜಾಕ್ ಖಾದ್ರಿ ವ ಹಾಷಮಿ ಮಾತನಾಡಿ, ಹಜರತ್ ಮೆಹಬೂಬ್ ಸುಭಾನಿ ದರ್ಗಾ ಸರ್ವ ಜನಾಂಗದ ಭಕ್ತಿಯ ಕೇಂದ್ರವಾಗಿದೆ. ಸೂಫಿ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಹೋದರತ್ವದಿಂದ ಬದುಕಬೇಕು ಎಂದರು. ಮಹಾಪ್ರಸಾದ ಸೇವೆ ನೆರವೇರಿತು. ಬಾಗವಾನ ಚಾಳ್‌ದಲ್ಲಿರುವ ಇಸ್ಮಾಯಿಲ್ ಬಡೇಘರ್ ಅವರ ಮನೆಯಿಂದ ಗಂಧ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net