ಇಎಸ್‌ಐಸಿ ಪಿಂಚಣಿದಾರರ ಒಕ್ಕೂಟದ ರಜತ ಮಹೋತ್ಸವ

1
Published on

ಮೈಸೂರು: ಇಎಸ್‌ಐ ಅಡಿಯಲ್ಲಿ ಸಂಘಟಿತ ಕಾರ್ಮಿಕರಂತೆಯೇ ಅಸಂಘಟಿತ ಕಾರ್ಮಿಕರಿಗೂ ಎಲ್ಲ ಸೌಲಭ್ಯ ದೊರೆಯಬೇಕು ಎಂದು ಇಎಸ್‌ಐ ಕಾರ್ಪೊರೇಷನ್ ಸದಸ್ಯ ಕೆ.ರಾಧಾಕೃಷ್ಣ ಹೇಳಿದರು.

ಇಎಸ್‌ಐಸಿ ಪಿಂಚಣಿದಾರರ ಒಕ್ಕೂಟದ ಕರ್ನಾಟಕ ವಿಭಾಗದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಒಕ್ಕೂಟದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸಂಘಟಿತ ಕಾರ್ಮಿಕರಿಗೆ ಇಎಸ್‌ಐ ಅಡಿಯಲ್ಲಿ ವಿಮಾ ಸೌಲಭ್ಯ ನೀಡಲಾಗುತ್ತದೆ. ಜತೆಗೆ, ಸರ್ಕಾರದ ಅನೇಕ ಸೌಲಭ್ಯಗಳು ದೊರೆಯುತ್ತಿರುವುದು ಖುಷಿಯ ವಿಚಾರ. ಇವರ ಜತೆಗೆ, ಅಸಂಘಟಿತ ಕಾರ್ಮಿಕರಿಗೂ ಇಎಸ್‌ಐ ಯೋಜನೆಯ ಲಾಭ ಸಿಗಬೇಕು. ಆಗ ಇಎಸ್‌ಐ ಯೋಜನೆಗೆ ದೊಡ್ಡ ಯಶಸ್ಸು ಸಿಗುತ್ತದೆ ಎಂದರು.

ನಿವೃತ್ತ ಐಜಿಪಿ ಕೆ.ಅರ್ಕೇಶ್ ಮಾತನಾಡಿ, ಇಎಸ್‌ಐಸಿ ಪಿಂಚಣಿದಾರರ ಒಕ್ಕೂಟ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಇಎಸ್‌ಐ ಉತ್ತಮ ಯೋಜನೆಯಾಗಿದೆ. ಕೆಲಸದ ಜತೆಗೆ, ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಕರೆ ನೀಡಿದರು.


ಇದೇ ವೇಳೆ ಇಎಸ್‌ಐಸಿ ಪಿಂಚಣಿದಾರರ ಒಕ್ಕೂಟ ಹೊರತಂದಿರುವ ‘ರಜತ ಸಂಭ್ರಮ’ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗದಿಂದ ಒಕ್ಕೂಟದ ಸದಸ್ಯರು ಆಗಮಿಸಿದ್ದರು.
ಇಎಸ್‌ಐಸಿ ಪ್ರಾದೇಶಿಕ ನಿರ್ದೇಶಕ ಟಿ.ರೇಣುಕಪ್ರಸಾದ್, ಒಕ್ಕೂಟದ ಪದಾಧಿಕಾರಿಗಳಾದ ಆರ್.ಕೆ.ಶರ್ಮಾ, ಬಿ.ಕೆ.ವೆಂಕಟೇಶ್, ಸಿ.ಎನ್.ರವೀಂದ್ರನಾಥ್, ವಿ.ನಂಜುಂಡಮೂರ್ತಿ, ಎ.ಎಂ.ರಾಮನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net