

ಅಥಣಿ ಗ್ರಾಮೀಣ: ಪರಮಾರ್ಥ ತತ್ತ್ವ ಬೋಧನೆ ಹಾಗೂ ಆಧ್ಯಾತ್ಮಿಕ ಚಿಂತನೆಯ ಮೂಲಕ ಜನರಲ್ಲಿ ಏಕತೆ ಭಾವ ಮೂಡಿಸುತ್ತಿರುವ ರಡ್ಡೇರಹಟ್ಟಿ ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮದ ಕಾರ್ಯ ಶ್ಲಾಘನೀಯ ಎಂದು ಜಾಲಿಹಾಳದ ವಿಲಾಸರಾವ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರಾವಣ ಸಪ್ತಾಹ ಸಮಾರೋಪ ಹಾಗೂ ಸರ್ವಧರ್ಮ ಸಮಾವೇಶದಲ್ಲಿ ಮಾತನಾಡಿ, ಅಧ್ಯಾತ್ಮ ಚಿಂತನೆಯಿಂದ ಶಾಂತಿ ಲಭಿಸುತ್ತದೆ ಎಂದರು.
ಸಂಕೋನಟ್ಟಿಯ ಸಂಗಮೇಶ್ವರ ಮಹಾರಾಜರು ಮಾತನಾಡಿದರು. ಗರಿಮಲ್ಲೇಶ್ವರ ಮಹಾರಾಜರ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಕರಡಿ ಮಜಲು, ಡೊಳ್ಳಿನ ಮೇಳದೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಮಹೇಶ ಮಹಾರಾಜರು, ಗಿರೀಶ ಮಹಾರಾಜರು ಆಶೀರ್ವಚನ ನೀಡಿದರು. ಸಂಗಮೇಶ ಬೆಳ್ಳಂಕಿ, ಅಣ್ಣಾಸಾಹೇಬ ಬಿಸಲಾಪುರ ದಾಸಬೋಧ ವಾಚಿಸಿದರು.
ಮಹಾದೇವ ಗಲಗಲಿ, ಪಾಂಡು ಭೋಸಲೆ, ಶ್ರೀಶೈಲ ಬೆಳ್ಳಂಕಿ, ತುಕಾರಾಮ ಖೋತ, ಸಂಗಪ್ಪ ಭೂಸರೆಡ್ಡಿ, ತಿಪ್ಪಣ್ಣ ಬೆಳ್ಳಂಕಿ, ಸಂಗಪ್ಪ ಬಿಸಲಾಪುರ, ಮಲ್ಲಪ್ಪ ಬೆಳ್ಳಂಕಿ, ಶ್ರೀಶೈಲ ಬೆಕ್ಕೆರಿ, ದುರಂಧರ ಭೋಸಲೆ ಇತರರಿದ್ದರು.