ಗೋವಾದಲ್ಲಿ ಇಬ್ಬರು ಕನ್ನಡಿಗರು ಶಾಸಕರಾಗಲಿ

5Goa4
Published on

ಪಣಜಿ: ಎಲ್ಲಿಯವರೆಗೂ ನಾವು ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮನ್ನು ಅಸಮರ್ಥರು ಆಳುತ್ತಿರುತ್ತಾರೆ. ಗೋವಾ ಕನ್ನಡಿಗರು ಮನಸ್ಸು ಮಾಡಿದರೆ ಇಲ್ಲಿ ಇಬ್ಬರು ಕನ್ನಡಿಗರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಬಾಗಲಕೋಟೆಯ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ಮಡಗಾಂವನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಸಾಪ ಗೋವಾ ಘಟಕ ಮತ್ತು ಸಾಲಸೇಟ ತಾಲೂಕು ಘಟಕದಿಂದ ಆಯೋಜಿಸಿದ್ದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹೆಚ್ಚಿನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲಾವಿದರಿಗೆ ಶಾಲು, ಸ್ಮರಣಿಕೆ ನೀಡುವ ಬದಲು ಹಣ ನೀಡಿದರೆ ಒಂದಿಷ್ಟು ಅನುಕೂಲವಾಗಲಿದೆ. ಗೋವಾದಲ್ಲಿ ಇಬ್ಬರು ಕನ್ನಡಿಗ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಕನ್ನಡಿಗರಿಗೆ ಇದೆ ಎಂದರು.

ಇಂಡೊ ಪೋರ್ಚ್‌ಗೀಸ್ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಮಾತನಾಡಿ, ಗೋವಾದಲ್ಲಿ ಕನ್ನಡಿಗರೆಲ್ಲ ಒಂದಾಗಬೇಕಾಗಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡಿಗರು ಚದುರಿ ಹೋಗುತ್ತಿದ್ದಾರೆ. ಕನ್ನಡಿಗರ ಧ್ವನಿ ಒಂದಾಗಬೇಕಾಗಿದೆ. ಕನ್ನಡಿಗರ ಒಗ್ಗಟ್ಟಿನ ಶಕ್ತಿ ತೋರಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಗೋವಾ ಅಧ್ಯಕ್ಷ ಸಿದ್ದಣ್ಣ ಮೇಟಿ, ನಾವೆಲಿಮ್ ಶಾಸಕ ಉಲ್ಲಾಸ ತುವೇಕರ್, ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕರ್ನಾಟಕ ರಾಜ್ಯೋತ್ಸವ ಸಮಿತಿ ಗೋವಾ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಧಾರವಾಡದ ಸಾಯಿ ಪಿಯು ಕಾಲೇಜು ಪ್ರಾಚಾರ್ಯೆ ಡಾ. ವೀಣಾ ಬಿರಾದಾರ್, ಧಾರವಾಡ ಪತ್ರಗಾರ ಇಲಾಖೆಯ ಸಹ ನಿರ್ದೇಶಕಿ ಡಾ. ಮಂಜುಳಾ ಎಲಿಗಾರ ಮಾತನಾಡಿದರು. ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಕಸಾಪ ಗೌರವಾಧ್ಯಕ್ಷ ಪಡದಯ್ಯ ಹಿರೇಮಠ, ಕಸಾಪ ಪಣಜಿ ತಾಲೂಕು ಘಟಕದ ಅಧ್ಯಕ್ಷ ಹನುಮಂತ ಗೊರವರ್, ಪ್ರೊ. ಪ್ರಭುಲಿಂಗ ದಂಡಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net