

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿರೋದ್ಯೋಗಿಗಳು ಮೊದಲು ತಮ್ಮ ಜೀವನ ಸಾಗಿಸುವಲ್ಲಿ ಉದ್ಯೋಗದ ಕುರಿತು ಸ್ಪಷ್ಟತೆ ಮತ್ತು ಇಚ್ಛಾಶಕ್ತಿ ಹೊಂದಿರಬೇಕು ಎಂದು ಟಾಟಾ ಇಲೆಕ್ಟ್ರಾನಿಕ್ ಕಂಪನಿ ಅಧಿಕಾರಿ ಅರುಣ ಜೀವನ ಹೇಳಿದರು.
ನಗರದ ಕೆ.ಇ. ಬೋರ್ಡ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ಐಕ್ಯೂಎಸಿ ಮತ್ತು ಟಾಟಾ ಇಲೆಕ್ಟ್ರಾನಿಕ್ ಉತ್ಪಾದನಾ ಕಂಪನಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ದಾಂತಿ ಮಾತನಾಡಿ, ವಿದ್ಯಾಥಿರ್ಗಳು ತಮಗೆ ದೊರೆತ ಉದ್ಯೋಗ ಮೇಳದ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡೆಯಬೇಕು ಎಂದರು.
ಮೇಳದಲ್ಲಿ 237 ಆಕಾಂಕ್ಷಿಗಳು ಭಾಗವಹಿಸಿದ್ದು, 96 ಜನರಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ನೀಡಲಾಯಿತು. ಪವನ ಪೋತ್ನೀಸ್, ಕಾಲೇಜಿನ ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.
ಪ್ರೊ. ಪ್ರೀತಿ ಇಟ್ಟಿಗಟ್ಟಿ ಸ್ವಾಗತಿಸಿದರು.