ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಶೀಘ್ರ ನ್ಯಾಯ ಸಿಗಲಿ

Women
Published on

ಮೈಸೂರು: ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿ ಸ್ಪಂದನೆಗಾಗಿ ನ್ಯಾಯಾಲಯಗಳನ್ನು ಕ್ರಿಯಾಶೀಲಗೊಳಿಸಿ, ನ್ಯಾಯಾಂಗದ ಎಲ್ಲ ಸ್ಥಳಗಳಲ್ಲೂ ಶೀಘ್ರ ನ್ಯಾಯ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಗ್ರಹಿಸಿದೆ.


ದೇಶ, ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬಹಳಷ್ಟು ಪ್ರಕರಣಗಳು ಮುನ್ನೆಲೆಗೆ ಬಾರದೆ ಮುಚ್ಚಿ ಹೋಗುತ್ತಿವೆ. ಹೀಗಾಗಿ ಇದನ್ನು ತಡೆಗಟ್ಟಲು ಯುವ ಸಮೂಹದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆ ಬೆಳೆಸುವ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡಬೇಕು ಎಂದು ಸಾಹಿತಿ ನಾ.ದಿವಾಕರ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಕೋಲ್ಕತ್ತದ ಆರ್‌ಜಿ ಕರ್ ಆಸ್ಪತ್ರೆ, ಮಣಿಪುರದ ಹತ್ರಾಸ್ ಘಟನೆ ಮೊದಲಾದ ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ಲಿಂಗಸೂಕ್ಷ್ಮತೆ ಬೆಳೆಸುವ ನಿಟ್ಟಿನಲ್ಲಿ ನಾವು ವಿಫಲರಾಗಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು


ಪೊಲೀಸ್, ನ್ಯಾಯಾಂಗ, ಪಂಚಾಯಿತಿ ಮೊದಲಾದ ಆಡಳಿತ ಕೇಂದ್ರ, ಸರ್ಕಾರಿ ಸಂಸ್ಥೆ, ಸರ್ಕಾರದ ಅನುದಾನವನ್ನು ಅವಲಂಬಿಸುವ ಸಂಸ್ಥೆ ಸಿಬ್ಬಂದಿಯಲ್ಲಿ ಲಿಂಗಸೂಕ್ಷ್ಮತೆ, ಮಹಿಳಾ ಸಂವೇದನೆ ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ಸಲ್ಲಿಸುವ ದೂರುಗಳನ್ನು ಕೂಡಲೇ ಸ್ವೀಕರಿಸಿ, ನಿಗದಿತ ಅವಧಿಯೊಳಗೆ ವಿಚಾರಣೆ ನಡೆಸುವ ನಿಟ್ಟಿಯಲ್ಲಿ ಕ್ರಮವನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿದರು

.
ಕೆಲಸದ ಸ್ಥಳಗಳಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯದ ದೂರು ವಿಚಾರಣೆಗೆ ಆಂತರಿಕ ವಿಚಾರಣಾ ಸಮಿತಿ ನೇಮಕ ಮಾಡಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಆನ್‌ಲೈನ್ ಮೂಲಕ ಅನಿರ್ಬಂಧಿತವಾಗಿ ಪ್ರಸಾರ ಆಗುತ್ತಿರುವ ಅಶ್ಲೀಲ ವಿಡಿಯೋಗಳನ್ನು ಕೂಡಲೇ ನಿರ್ಬಂಧಿಸಬೇಕು.

ಭ್ರೂಣಲಿಂಗ ಪತ್ತೆ ಯಂತ್ರ ಹೊಂದಿರುವ ಎಲ್ಲ ಚಿಕಿತ್ಸಾಲಯ, ಮೊದಲಾದವುಗಳ ಪರವಾನಗಿ ರದ್ದುಪಡಿಸಬೇಕು, ಕೊಳಚೆ ಪ್ರದೇಶಗಳ ನಿವಾಸಿಗಳು ಮಾದಕ ವಸ್ತು ಸೇವನೆಗೆ ಬಲಿಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ವಿವಿಧ ಸಂಘಟನೆಗಳ ಮುಖಂಡರಾದ ಸಬಿಹಾ ಭೂಮಿಗೌಡ, ಸ್ಟಾೃನ್ಲಿ, ಪರಶು, ಪ್ರೊ.ಕೆ. ಕಾಳಚನ್ನೇಗೌಡ, ಉಷಾ ಆಂಬ್ರೋಸ್, ಸುಶೀಲಾ, ಜಿ.ಎಸ್. ಸೀಮಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net