

ಕುಂದಾಪುರ: ಮನೆ ಮನೆಗಳಲ್ಲೂ ನಿತ್ಯ ಭಗವದ್ಗೀತೆಯ ಅಧ್ಯಯನ ಆಗಬೇಕು. ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಲು ಭಗವದ್ಗೀತೆಯ ಅಧ್ಯಯನ ಅತ್ಯಗತ್ಯ. ನಮ್ಮ ಸಂಸ್ಕೃತಿಯನ್ನೂ ರೂಢಿಸಿಕೊಳ್ಳಬೇಕು ಎಂದು ಗೀತಾಜ್ಞಾನ ಯಜ್ಞ ವೇದಿಕೆ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ ಹೇಳಿದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗೀತಾ ಸಮಾವೇಶದಲ್ಲಿ ಮಾತನಾಡಿದರು.
ಮುಖ್ಯ ಅತಿಥಿ ರಾಘವೇಂದ್ರ ಐತಾಳ್ ಕೊಲ್ಲೂರು ಮಾತನಾಡಿದರು. ಗೀತಾಜ್ಞಾನ ಯಜ್ಞದ ವಿದ್ಯಾರ್ಥಿಗಳಾದ ಕುಸುಮಾವತಿ ಶೆಟ್ಟಿ ನೇರಳಕಟ್ಟೆ, ಯಮುನಾ, ಜ್ಯೋತಿ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಸಿಕೊಂಡರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀದೇವಿ ಐತಾಳ್ ಕೊಲ್ಲೂರು ಧ್ಯೇಯಗೀತೆ ಹಾಡಿದರು. ಸಂಘಟನಾ ಮಂತ್ರವನ್ನು ಆಧ್ಯಾ ಐತಾಳ್ ಪಠಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲ ಶರಣಕುಮಾರ ವಂದಿಸಿದರು. ಜ್ಯೋತಿ ನಿರೂಪಿಸಿದರು.