ರಸ್ತೆಗಳ ಗುಣಮಟ್ಟದ ಕಾಳಜಿ ಇರಲಿ

01-GPT-1
Published on

ಗುಂಡ್ಲುಪೇಟೆ: ಹದಗೆಟ್ಟ ರಸ್ತೆಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ತಮ್ಮ ಭಾಗದ ರಸ್ತೆಗಳ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಶನಿವಾರ ತಾಲೂಕಿನ ಹಸಗೂಲಿಯಿಂದ ಮಂಚಹಳ್ಳಿ ಗ್ರಾಮದವರೆಗೆ 2 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತೀವ್ರ ಹದಗೆಟ್ಟಿದ್ದ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಹಸಗೂಲಿ ಮಂಚಹಳ್ಳಿ ರಸ್ತೆಗೆ 2 ಕೋಟಿ ರೂ., ಅಗತಗೌಡನಹಳ್ಳಿ ಹೆಗ್ಗಡಹಳ್ಳಿ ರಸ್ತೆಗೆ 1.6 ಕೋಟಿ ರೂ., ಕೆಲಸೂರಿನಿಂದ ಮಲ್ಲಮ್ಮನಹುಂಡಿ ರಸ್ತೆಗೆ 1.8 ಕೋಟಿ ರೂ., ಶಿಂಡನಪುರದಿಂದ ಕಂದೇಗಾಲ ರಸ್ತೆ ಅಭಿವೃದ್ಧಿಗೆ 1.45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಕೆ.ಪ್ರಭಾಕರ್, ಮಹೇಶ್ವರಿ, ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್, ದೇವಯ್ಯ, ಎಸ್.ಸಿ.ಮಂಜುನಾಥ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net