ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ

ಪಿರಿಯಾಪಟ್ಟಣ ತಾಲೂಕು ದೊರೆಕೆರೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಅಹಲವಾಲು ಸ್ವೀಕರಿಸಿದ ಬಳಿಕ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ನಿತಿನ್ ವೆಂಕಟೇಶ, ಡಿ.ಟಿ.ಸ್ವಾಮಿ, ರಾಮತ್ ಜಾನ್ ಬಾಬು, ಡಿ.ಎ.ಜವರಪ್ಪ, ಅಪ್ಪಾಜಿಗೌಡ, ನಿಸರ್ಗಪ್ರಿಯ, ಸುನಿಲ್, ರವಿ ಪ್ರಸನ್ನ ಇತರರು ಇದ್ದರು
ಪಿರಿಯಾಪಟ್ಟಣ ತಾಲೂಕು ದೊರೆಕೆರೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಅಹಲವಾಲು ಸ್ವೀಕರಿಸಿದ ಬಳಿಕ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ನಿತಿನ್ ವೆಂಕಟೇಶ, ಡಿ.ಟಿ.ಸ್ವಾಮಿ, ರಾಮತ್ ಜಾನ್ ಬಾಬು, ಡಿ.ಎ.ಜವರಪ್ಪ, ಅಪ್ಪಾಜಿಗೌಡ, ನಿಸರ್ಗಪ್ರಿಯ, ಸುನಿಲ್, ರವಿ ಪ್ರಸನ್ನ ಇತರರು ಇದ್ದರು
Published on

ರಾವಂದೂರು: ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಬಸ್ ಸೌಕರ್ಯ ಒದಗಿಸಲಾಗುತ್ತದೆ ಎಂದು ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಪಿರಿಯಾಪಟ್ಟಣ ತಾಲೂಕು ದೊರೆಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ನಮಗೆ ರಾವಂದೂರಿನ ಶಾಲೆಗಳಿಗೆ ತೆರಳಲು ನಿಗದಿತ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ತಡವಾಗಿ ಹೋದರೆ ಶಾಲೆಯಿಂದ ಹೊರಗೆ ನಿಲ್ಲಿಸುತ್ತಾರೆ ಎಂದು ಸಚಿವರ ಬಳಿ ಅಲವತ್ತುಕೊಂಡರು.

ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ, ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಬಸ್ ಸೌಕರ್ಯ ಕಲ್ಪಿಸಬೇಕು. ಅಲ್ಲದೆ ಕೆಲವು ವೇಳೆ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸದೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನನ್ನ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅಧಿಕಾರಾವಧಿಯಲ್ಲೇ ಕೈಗೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಾಮತ್ ಜಾನ್ ಬಾಬು, ಜಿಪಂ ಮಾಜಿ ಸದಸ್ಯ ಡಿ.ಎ.ಜವರಪ್ಪ, ಅಪ್ಪಾಜಿಗೌಡ, ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ, ತಾಪಂ ಇಒ ಸುನಿಲ್, ಬಿಇಒ ರವಿ ಪ್ರಸನ್ನ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್ , ಸಾರಿಗೆ ಘಟಕದ ವ್ಯವಸ್ಥಾಪಕ ದರ್ಶನ್, ವೆಂಕಟೇಶ, ದಿನೇಶ, ಸೋಮಯ್ಯ , ಮಲ್ಲಿಕಾರ್ಜುನ್, ಲವ , ಕೆ.ಶುಭ, ಮುಖಂಡರಾದ ಹೊಲದಪ್ಪ, ಕೆಲ್ಲೂರು ಎ.ನಾಗರಾಜ್ , ಡಿ.ಎಸ್.ನಂದೀಶ್, ಕಿರಂಗೂರು ಮಂಜುನಾಥ್, ಅಣ್ಣೇಗೌಡ, ಮಾದೇಗೌಡ, ಲೋಕೇಶ್, ಭೀಮಣ್ಣ, ಪಿಡಿಒ ಮಂಜುನಾಥ್ ಇತರರು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net