

ತರೀಕೆರೆ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ವಿಳಂಬವಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸ ಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಉಪವಿಭಾಗಾಕಾರಿ ಕಚೇರಿ ಅಭಿಲೇಖಾಲಯದಲ್ಲಿ ಭೂ ಸುರಕ್ಷಾ ಯೋಜನೆಯಡಿ ಕಡತಗಳ ಸ್ಕಾೃನಿಂಗ್ ನಡೆಸಲು ಅಳವಡಿಸಿರುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಬಹುತೇಕ ಎಲ್ಲ ಕೆಲಸ ಕಾರ್ಯ ಮತ್ತು ಸೌಲಭ್ಯಗಳು ಕಂದಾಯ ಇಲಾಖೆಯಿಂದಲೇ ಪಡೆದು ಕೊಳ್ಳುವುದರಿಂದ ದೂರ ದೂರುಗಳಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನಗತ್ಯವಾಗಿ ಅಲೆದಾಡಿಸದಂತೆ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡ ಬೇಕು. ಭೂ ಸುರಕ್ಷಾ ಯೋಜನೆಯಡಿ ಅಳವಡಿಸಿರುವ ಸ್ಕಾೃನಿಂಗ್ ಯಂತ್ರದ ಸದ್ಬಳಕೆಯಾಗಬೇಕು ಎಂದು ಸಲಹೆ ನೀಡಿದರು.
ಎಸಿ ಎನ್.ವಿ.ನಟೇಶ್ ಮಾತನಾಡಿ, ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಆಳವಡಿಸಿರುವ ಯಂತ್ರದ ಮೂಲಕ ಮೊದಲ ಹಂತದಲ್ಲಿ ಎ ಮತ್ತು ಬಿ ವರ್ಗದ 18,131 ಕಡತಗಳನ್ನು ಸ್ಕಾೃನಿಂಗ್ ಪ್ರಕ್ರಿಯೆಗೊಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ತಹಸೀಲ್ದಾರ್ ವಿಶ್ವಜೀತ ಮೆಹತಾ, ಉಪ ತಹಸೀಲ್ದಾರ್ ಎಚ್.ಕೃಷ್ಣಮೂರ್ತಿ ಮತ್ತಿತರರಿದ್ದರು.