ನಾಡು, ನುಡಿ ಅಭಿಮಾನ ಇರಲಿ

web1
ಹುಕ್ಕೇರಿ ಅಡವಿಸಿದ್ದೇಶ್ವರ ಮಠದ ಬಳಿ ತಾಯಿ ಭುವನೇಶ್ವರಿ ಮೆರವಣಿಗೆಗೆ ಚಂದ್ರಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ಶಿವಬಸವ ಸ್ವಾಮೀಜಿ, ಅಭಿನವ ಮಂಜುನಾಥ ಶ್ರೀಗಳು, ಜಯಗೌಡ ಪಾಟೀಲ ಇತರರಿದ್ದರು.
Published on

ಹುಕ್ಕೇರಿ: ಪಟ್ಟಣದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ. ಎಲ್ಲರೂ ನಾಡು-ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸ್ಥಳೀಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ವಿರಕ್ತಮಠದ ಶಿವಬಸವ ಸ್ವಾಮೀಜಿ ಮತ್ತು ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಸ್ವಾಮೀಜಿ ಮಾತನಾಡಿ, ಆಚರಣೆ ಕೇವಲ ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.

ಶಾಸಕ ನಿಖಿಲ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರ್ಮನ್ ಪವನ ಕತ್ತಿ ಮೆರವಣಿಗೆಯ ಜಾನಪದ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯೋತ್ಸವ ಕನ್ನಡಿಗರ ಮನ ಮನೆಗಳಲ್ಲಿ ನಿತ್ಯ ಮಾತಾಗಬೇಕು ಎಂದು ಹೇಳಿದರು. ಬೆಳಗ್ಗೆ ಅಡವಿಸಿದ್ಧೇಶ್ವರ ಮಠದಿಂದ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮಠಕ್ಕೆ ಬಂದಿತು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

ಹಿರಾ ಶುಗರ್ಸ್‌ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ, ಮುಖಂಡರಾದ ಜಯಗೌಡ ಪಾಟೀಲ, ಪ್ರಜ್ವಲ ನಿಲಜಗಿ, ಉದಯ ಹುಕ್ಕೇರಿ, ರಾಜೇಶ ಮುನ್ನೋಳಿ, ಭೀಮಶಿ ಗೋರಖನಾಥ, ಜ್ಯೋತಿಭಾ ದುಪ್ಪಟ್ಟಿ, ಸುಹಾಸ ಹಾವಣ್ಣವರ, ರಾಜು ಅಂಕಲೆ, ಆನಂದ ಲಕ್ಕುಂಡಿ, ಚನ್ನಪ್ಪ ಗಜಬರ, ರಮೇಶ ಬೋಳಗಾವಿ, ಕುಮಾರ ಜುಠಾಳೆ, ಅಪ್ಪುಸ್ ತುಬಚಿ, ಸುಹಾಸ ನೂಲಿ, ರೋಹಿತ ಹೆದ್ದೂರಶೆಟ್ಟಿ, ಮಧುಕರ ಕರನಿಂಗ, ಶಹಜಾನ ಬಡಗಾಂವಿ, ಪುಟ್ಟು ಖಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net