ಕನ್ನಡ ಭಾಷೆ, ನೆಲ, ಜಲದ ಅಭಿಮಾನ ಇರಲಿ

10CKD4
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 40;
Published on

ಚಿಕ್ಕೋಡಿ: ಕನ್ನಡಿಗರಾದ ನಾವು ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಹೊಂದಬೇಕು ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿಎಲ್‌ಇ ಸಂಸ್ಥೆಯ ಸಭಾಭವನದಲ್ಲಿ ಬೆಂಗಳೂರಿನ ಜಗನ್ನಾಥ ಬಳಗ ಹಾಗೂ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಮಾಸದ ಮಾಧುರ್ಯ ೧೦೨ನೇ ಸಮಾರಂಭ ಹಾಗೂ ಕನ್ನಡ ಕಲಾ ಕಲರವ ನಾಡು-ನುಡಿ ಕವಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ಕನ್ನಡದ ಕಳಸ ಎಂದ್ಹೇಳಿ ಅಲ್ಲಿಯೇ ಕರಾಳ ದಿನ ಆಚರಿಸುವರ ಜತೆ ಸೆಲೀ ತೆಗೆದುಕೊಳ್ಳುವುದು ನ್ಯಾಯವಲ್ಲ. ಬೆಳಗಾವಿ ಎಂದೆದಿಗೂ ಕರ್ನಾಟಕದ್ದೇ ಆಗಿದೆ ಎಂದು ತಿಳಿಸಿದರು.

ನಿಪ್ಪಾಣಿ ಕಸಾಪ ಅಧ್ಯಕ್ಷ ಈರಣ್ಣ ಶಿರಗಾಂವಿ ಮಾತನಾಡಿದರು. ಜಗನ್ನಾಥ ಬಳಗದ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಿಎಲ್‌ಇ ಸಂಸ್ಥೆಯ ಯುವ ನಿರ್ದೇಶಕ ಮಲ್ಲಿಕಾರ್ಜುನ ಕವಟಗಿಮಠ ಸಮಾರಂಭಕ್ಕೆ ಚಾಲನೆ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ ಮೋಪಗಾರ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ, ಪ್ರಾಚಾರ್ಯ ಡಾ.ಸುರೇಶ ಉಕ್ಕಲಿ, ಲಲಿತಾ ಹಿರೇಮಠ, ಮಾರುತಿ ಕೊಣ್ಣೂರಿ, ಭರತ ಕಲಾಚಂದ್ರ, ಸುನೀತಾ ಮಗದುಮ್ಮ, ನಾಗರಾಜ ಮಾಲಗತ್ತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net