ಸಮಾಜಸೇವೆಯಲ್ಲಿ ಆಸಕ್ತಿ ಮೂಡಲಿ

22 GVT 01
ಗಂಗಾವತಿ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ತೃತೀಯ ಸೋಪಾನ ಮತ್ತು ತಾಲೂಕು ಮಟ್ಟದ ದ್ವೀತಿಯ ಸೋಪಾನ ಪರೀಕ್ಷೆ ಶಿಬಿರವನ್ನು ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಬಿಜೆಪಿ ಮುಖಂಡ ರಾಚಪ್ಪ ಸಿದ್ದಾಪುರ, ಸಂಸ್ಥೆ ತಾಲೂಕು ಘಟಕದ ಕಾರ್ಯದರ್ಶಿ ಹುಸೇನಸಾಬ್ ಮಕಾನದಾರ್, ತರಬೇತುದಾರರಾದ ಸೈಯ್ಯದ್ ಮಹ್ಮದ್ ಗುತ್ತಿ, ಶರ್ೀಸಾಬ್, ಎರ‌್ರೆಣ್ಣ ಇತರರಿದ್ದರು.
Published on

ಗಂಗಾವತಿ: ಶಿಸ್ತು ಮತ್ತು ಸಂಯಮತೆ ಕಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆಯುವುದರಿಂದ ಎಲ್ಲ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಹೇಳಿದರು.

ನಗರದ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ತೃತೀಯ ಸೋಪಾನ ಮತ್ತು ತಾಲೂಕು ಮಟ್ಟದ ದ್ವೀತಿಯ ಸೋಪಾನ ಪರೀಕ್ಷೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಸಂಸ್ಥೆ ರಾಜ್ಯದಲ್ಲಿ ಉತ್ತಮ ಸಂಸ್ಥೆಯಾಗಿದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ಪಾಸಾದವರಿಗೆ ರಾಜ್ಯಪಾಲರ ಪ್ರಶಂಸನಾ ಪತ್ರ ದೊರೆಯಲಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲೂ ಮೀಸಲು ದೊರೆಯಲಿದೆ. ಕಲಿಕೆಗೆ ಪೂರಕವಾದ ಏಕಾಗ್ರತೆ ಬರಲಿದ್ದು, ಸಮಾಜಸೇವಾ ಚಟುವಟಿಕೆಗಳಲ್ಲೂ ಆಸಕ್ತಿ ಮೂಡಿಸಲಿದೆ ಎಂದರು.

ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್ ಮಾತನಾಡಿ, ಸಂಸ್ಥೆ ಬೆಳವಣಿಗೆ ಮತ್ತು ಶಿಬಿರಾರ್ಥಿಗಳ ಹೆಚ್ಚಳಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದ್ದು, ಅಗತ್ಯವಿರುವ ನಿವೇಶನ ಒದಗಿಸಲು ನಗರಸಭೆ ಬದ್ಧವಾಗಿದೆ ಎಂದರು.

ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಿನ ವಿವಿಧ ಶಾಲೆಗಳಿಂದ 400ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net