ಮಾಡುವ ಕೆಲಸದಲ್ಲಿ ಏಕಗ್ರತೆ ಇರಲಿ

12 gkp 02
Published on

ಗೋಣಿಕೊಪ್ಪ: ಬದುಕುವುದು ಹಾಗೂ ಬಾಳುವುದು ನಡುವಿನ ವ್ಯತ್ಯಾಸ ತಿಳಿದುಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಗೋಪಾಲನ್ ಜಗದೀಶ್ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಾಜೀ ಅಧ್ಯಕ್ಷತೆಯಲ್ಲಿ ಶಾರಾದಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಏಕಾಗ್ರತೆಯಿಂದ ಕೈಗೊಂಡ ಕೆಲಸಗಳಿಂದ ಮಾತ್ರ ಯಶಸು ಸಾಧಿಸಲು ಸಾಧ್ಯ. ಮನುಷ್ಯ ಬದುಕು ಸಾಗಿಸುವುದರೊಂದಿಗೆ ಉತ್ತಮವಾಗಿ ಬಾಳುವುದನ್ನು ಕಲಿತುಕೊಳ್ಳಬೇಕು ಎಂದರು.

ಮಡಿಕೇರಿ ತಾಲೂಕು ಡಿಡಿಪಿಯು ಭವಾನಿ ಮಾತನಾಡಿ, ವ್ಯಕ್ತಿ ಪರಿಪೂರ್ಣವಾಗಿ ಬೆಳವಣಿಗೆ ಹೊಂದಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ ಎಂದರು.

ಆಶ್ರಮದಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ಯಾಗತ ನೃತ್ಯ ಮೂಲಕ ಎಲ್ಲರ ಗಮನ ಸೆಳೆದರು. ಶ್ರೀ ಇಷ್ಟಸೇವನಂದಾಜಿ ವೇದಮಂತ್ರ ಪಠನೆ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಆಶ್ರಮದ ವತಿಯಿಂದ ತರಬೇತಿ ಪಡೆದ 47 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಪರಹಿತಾನಂದಾಜೀ ಸ್ವದೇಶಿ ಮಂತ್ರ ಪಠಿಸಿದರು.

ಮೆರವಣಿಗೆ: ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಆಶ್ರಮಕ್ಕೆ ತರಲಾಯಿತು. ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕ ಕುಮಾರ್ ಚಾಲನೆ ನೀಡಿದರು. ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಡೊಳ್ಳುಕುಣಿತ ಮೆರವಣಿಗೆಯ ಆಕರ್ಷಣೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net